ADVERTISEMENT

ಚನ್ನಗಿರಿ | ಗೋಪನಾಳ್ ಗ್ರಾಮದಲ್ಲಿ ಕಿಡಿಗೇಡಿಗಳಿಂದ ಸಮಾಧಿ ನಾಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 7:20 IST
Last Updated 20 ಸೆಪ್ಟೆಂಬರ್ 2023, 7:20 IST
ಚನ್ನಗಿರಿ ತಾಲ್ಲೂಕು ಗೋಪನಾಳ್ ಗ್ರಾಮದ ಹಕ್ಕಿಪಿಕ್ಕಿ ಸಮುದಾಯವರು ಸಮಾಧಿಯನ್ನು ಹೂವುಗಳಿಂದ ಅಲಂಕರಿಸಿ ಭಕ್ತಿ, ಭಾವದಿಂದ ಪೂಜೆ ಸಲ್ಲಿಸಿದರು
ಚನ್ನಗಿರಿ ತಾಲ್ಲೂಕು ಗೋಪನಾಳ್ ಗ್ರಾಮದ ಹಕ್ಕಿಪಿಕ್ಕಿ ಸಮುದಾಯವರು ಸಮಾಧಿಯನ್ನು ಹೂವುಗಳಿಂದ ಅಲಂಕರಿಸಿ ಭಕ್ತಿ, ಭಾವದಿಂದ ಪೂಜೆ ಸಲ್ಲಿಸಿದರು    

ಗೋಪನಾಳ್ (ಚನ್ನಗಿರಿ): ತಾಲ್ಲೂಕಿನ ಗೋಪನಾಳ್ ಗ್ರಾಮದ ಸ್ಮಶಾನದಲ್ಲಿದ್ದ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರ ಸಮಾಧಿಗಳನ್ನು ಹರೋನಹಳ್ಳಿ ಗ್ರಾಮದ ಕೆಲವು ಕಿಡಿಗೇಡಿಗಳು ಭಾನುವಾರ ನಾಶಪಡಿಸಿದ್ದಾರೆ.

‘ಗೋಪನಾಳ್‌ ಗ್ರಾಮದ ಗ್ರಾಮಠಾಣಾ ಜಾಗವನ್ನು ಹರೋನಹಳ್ಳಿ ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡು ತಮ್ಮ ಹೆಸರಿಗೆ ಪಹಣಿ ಮಾಡಿಸಿಕೊಂಡಿದ್ದಾರೆ. ಅದನ್ನು ರದ್ದುಗೊಳಿಸಿ, ಆ ಜಾಗವನ್ನು ನಿವೇಶನ ರಹಿತ ಕುಟುಂಬಗಳಿಗೆ ನೀಡಬೇಕು ಎಂದು ಒತ್ತಾಯಿಸಿ’ ಹರೋನಹಳ್ಳಿ ಗ್ರಾಮ ಪಂಚಾಯಿತಿ ಮುಂದೆ 12 ದಿನಗಳ ಕಾಲ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗಿತ್ತು. ಅದನ್ನು ಸಹಿಸಲಾರದೆ ಹರೋನಹಳ್ಳಿ ಗ್ರಾಮದ ಕಿಡಿಗೇಡಿಗಳು ನಮ್ಮ ಸಮುದಾಯವರ ಸಮಾಧಿಗಳನ್ನು ನಾಶಪಡಿಸಿದ್ದಾರೆ’ ಎಂದು ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆರ್. ಪುನೀತ್ ಕುಮಾರ್ ಆರೋಪಿಸಿದರು.

ಸ್ಮಶಾನಲ್ಲಿದ್ದ ಸಮಾಧಿಗಳನ್ನು ನಾಶಪಡಿಸಿದ ಕಿಡಿಗೇಡಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಗ್ರಾಮದ ಸಮುದಾಯವರು ಸೋಮವಾರ ತಮ್ಮ ಪೂರ್ವಜರ ಹಾಗೂ ಕುಟುಂಬಸ್ಥರ ಸಮಾಧಿಗಳನ್ನು ಮತ್ತೆ ಸಮಾಧಿ ಮಾಡಿ, ಸಮಾಧಿಗಳಿಗೆ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.