ADVERTISEMENT

ನ್ಯಾಮತಿ ತಾಲ್ಲೂಕಿನಾದ್ಯಂತ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 16:01 IST
Last Updated 9 ಅಕ್ಟೋಬರ್ 2024, 16:01 IST
<div class="paragraphs"><p>ಮಳೆ&nbsp;</p></div>

ಮಳೆ 

   

ನ್ಯಾಮತಿ: ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ತಡರಾತ್ರಿ ಉತ್ತಮ ಮಳೆಯಾಗಿದೆ.

ಗುಡುಗು, ಮಿಂಚು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಒಂದು ತಾಸಿಗಿಂತ ಹೆಚ್ಚು ಸುರಿದಿದೆ . ನ್ಯಾಮತಿ, ಸವಳಂಗ, ಬೆಳಗುತ್ತಿ, ಗೋವಿನಕೋವಿ, ಚೀಲೂರು, ಕೆಂಚಿಕೊಪ್ಪ ಜೀನಹಳ್ಳಿ ಭಾಗದಲ್ಲಿ ಹದ ಮಳೆಯಾಗಿದೆ. ಬುಧವಾರ ಗೋವಿನಕೋವಿ ಭಾಗದಲ್ಲಿ ಮಳೆಯಾಗಿದೆ. ಬೆಳಗುತ್ತಿಯಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ.

ADVERTISEMENT

ಈಗ ಬರುವ ಮಳೆಯಿಂದ ಹೂವಾಡುವ ಭತ್ತಕ್ಕೆ ತೊಂದರೆಯಾಗುತ್ತದೆ. ಫಸಲಿಗೆ ಬಂದಿರುವ ಮೆಕ್ಕೆಜೋಳದ ತೆನೆಗಳು ನೆಲಕ್ಕೆ ಬಾಗುತ್ತವೆ ಎಂದು ರೈತರಾದ ಗೋವಿನಕೋವಿ ವಿ.ಎಚ್.ರುದ್ರೇಶ, ಫಲವನಹಳ್ಳಿ ಹಳದಪ್ಪ, ರಾಮೇಶ್ವರ ನಾಗರಾಜ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.