ADVERTISEMENT

ಮಾಯಕೊಂಡ | ಅಧಿಕ ಮಳೆ: ಕೊಳವೆ ಬಾವಿಯಿಂದ ಚಿಮ್ಮಿದ ನೀರು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:21 IST
Last Updated 23 ಅಕ್ಟೋಬರ್ 2024, 15:21 IST
ಮಾಯಕೊಂಡ ಸುತ್ತಮುತ್ತ ಉತ್ತಮ ಮಳೆಯಾದ ಪರಿಣಾಮ ಬತ್ತಿದ್ದ ಕೊಳವೆಬಾವಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದು
ಮಾಯಕೊಂಡ ಸುತ್ತಮುತ್ತ ಉತ್ತಮ ಮಳೆಯಾದ ಪರಿಣಾಮ ಬತ್ತಿದ್ದ ಕೊಳವೆಬಾವಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದು   

ಮಾಯಕೊಂಡ: ವಾರದಿಂದ ನಿರಂತರ ಮಳೆಯಾಗುತ್ತಿರುವ ಕಾರಣ ಅಂತರ್ಜಲ ಮಟ್ಟ ಹೆಚ್ಚಿದ್ದು, ಈ ಹಿಂದೆ ಬತ್ತಿದ್ದ ಕೊಳವೆಬಾವಿಗಳಲ್ಲಿ ಒಂದೆರಡು ಇಂಚಿನಷ್ಟು ನೀರು ಹೊರಗೆ ಹರಿಯುತ್ತಿದೆ.

ಮಾಯಕೊಂಡ, ಆನಗೋಡು ಹೋಬಳಿಯ ಅಣಜಿ, ನೇರ್ಲಿಗೆ, ನರಗನಹಳ್ಲಿ, ಬಾವಿಹಾಳು, ಬಾಡ, ಅಣಬೇರು, ಹುಚ್ಚವ್ವನಹಳ್ಳಿ, ಕೊಡಗನೂರು, ಹೆಬ್ಬಾಳು ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಮಳೆಯಿಂದ ಅಂತರ್ಜಲ ಹೆಚ್ಚಾಗಿದ್ದು ಮೋಟಾರ್ ಮತ್ತು ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಕೊಳವೆಬಾವಿಗಳಿಂದ ಪವಾಡದಂತೆ ನೀರು ಚಿಮ್ಮುತ್ತಿದೆ‌.

ಬೇಸಿಗೆಯಲ್ಲಿ ಅಂತರ್ಜಲಮಟ್ಟ ಪಾತಾಳ ಸೇರಿ ಅಡಿಕೆ ತೋಟ ಒಣಗುವ ಹಂತಕ್ಕೆ ಹೋಗಿದ್ದವು. ಅಂತಹ ಕೊಳವೆ ಬಾವಿಗಳು ಈಗ ಸಮೃದ್ಧವಾಗಿರುವುದರಿಂದ ರೈತರು ಮತ್ತು ಅಡಿಕೆ ಬೆಳೆಗಾರರಲ್ಲಿ ಹರ್ಷ ಮನೆ ಮಾಡಿದೆ.‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.