ADVERTISEMENT

ಹರಿಹರ | ಹಿಟ್ ಅಂಡ್ ರನ್ ಪ್ರಕರಣ: ಗಾಯಾಳು ಸಾವು

​ಪ್ರಜಾವಾಣಿ ವಾರ್ತೆ
Published 21 ಮೇ 2024, 15:31 IST
Last Updated 21 ಮೇ 2024, 15:31 IST
   

ಹರಿಹರ: ಹರಿಹರ ಸಮೀಪದ ಕುಮಾರಪಟ್ಟಣಂ ಪೊಲೀಸ್ ಠಾಣೆ ವ್ಯಾಪ್ತಿ ಹರಿಹರ ರಸ್ತೆಯ (ಹಳೆ ಪಿ.ಬಿ.ರಸ್ತೆ) ತುಂಗಭದ್ರಾ ಸೇತುವೆ ಮೇಲೆ ಸಾಗುತ್ತಿದ್ದ ಅಪರಿಚಿತ ವಾಹನ ಗುದ್ದಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 

ಏ.5 ರಂದು ನಡೆದ ‘ಹಿಟ್ ಅಂಡ್ ರನ್’ ಘಟನೆಯಲ್ಲಿ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು. ಹರಿಹರದ ಸರ್ಕಾರಿ ಆಸ್ಪತ್ರೆ ಹಾಗೂ ದಾವಣಗೆರೆ ಸಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಡಲಾಗಿತ್ತು. ಗಾಯಾಳು ಏ.9 ರಂದು ಮೃತಪಟ್ಟಿದ್ದಾರೆ.

ಚಹರೆ: ಮೃತ ವ್ಯಕ್ತಿ 55 ರಿಂದ 60 ವರ್ಷ ವಯೋಮಾನದವರಿದ್ದು, ದುಂಡು ಮುಖ, ಕೆಂಪು ಮೈಬಣ್ಣ ಹೊಂದಿದ್ದು, ತಲೆಯಲ್ಲಿ ಬಿಳಿ ಕೂದಲಿವೆ. ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದರು. ಈ ವ್ಯಯಕ್ತಿ ಬಗ್ಗೆ ಮಾಹಿತಿ ಇದ್ದವರು ಕುಮಾರಪಟ್ಟಣಂ ಪೊಲೀಸ್ ಠಾಣೆಯನ್ನು (08373 242208, 9480804553) ಸಂಪರ್ಕಿಸಲು ಕೋರಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.