ADVERTISEMENT

ನ.12, 13ರಂದು ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 15:54 IST
Last Updated 10 ನವೆಂಬರ್ 2024, 15:54 IST

ಹೊನ್ನಾಳಿ: ನಿರ್ಮಲ ತುಂಗಭದ್ರಾ ಅಭಿಯಾನ ನ. 12ರ ಬೆಳಿಗ್ಗೆ ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮವನ್ನು ಪ್ರವೇಶಿಸಲಿದೆ ಎಂದು ಅಭಿಯಾನದ ತಾಲ್ಲೂಕು ಘಟಕದ ಕಾರ್ಯದರ್ಶಿ  ಎಂ. ವಾಸಪ್ಪ ಮಾಹಿತಿ ನೀಡಿದರು. 

ಚೀಲೂರು ಗ್ರಾಮದಲ್ಲಿ ಮಧ್ಯಾಹ್ನದ ಊಟದ ನಂತರ ಗೋವಿನಕೋವಿಯಲ್ಲಿ ಜನಜಾಗೃತಿ ಮೂಡಿಸಲಾಗುತ್ತದೆ. ತಾಲ್ಲೂಕಿನ ಹರಳಹಳ್ಳಿ, ದಿಡಗೂರು ಮೂಲಕ ಸಂಚರಿಸಿ ಸಂಜೆ 6 ಗಂಟೆಗೆ ಟಿ.ಬಿ. ವೃತ್ತದಲ್ಲಿ ಸಮಾವೇಶಗೊಳ್ಳಲಿದೆ ಎಂದರು.

ನಂತರ ಹೊನ್ನಾಳಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವಿದೆ. ಅಂದು ರಾತ್ರಿ ಹಿರೇಕಲ್ಮಠದಲ್ಲಿ ವಿಶ್ರಾಂತಿ ಪಡೆಯಲಿದೆ. ರಾತ್ರಿ ಭೋಜನದ ನಂತರ ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮಗಳು ಜರುಗಲಿವೆ ಎಂದರು.

ADVERTISEMENT

ನ. 13 ರಂದು ಹಿರೇಕಲ್ಮಠದಿಂದ ತುಂಗಭದ್ರಾ ನದಿ ಸೇತುವೆ ಮೂಲಕ ಗೊಲ್ಲರಹಳ್ಳಿ, ಬೇಲಿಮಲ್ಲೂರು, ಕೋಟೆಮಲ್ಲೂರು, ಚಿಕ್ಕಗೋಣಿಗೆರೆ, ಹಿರೇಗೋಣಿಗೆರೆ, ಹರಗನಹಳ್ಳಿಯಲ್ಲಿ ಸಂಚರಿಸಿ, ಕೋಣನತಲೆಯ ಮುಜಪ್ಪಿನಾರ್ಯ ಮಠದಲ್ಲಿ ತಂಗಲಿದೆ ಎಂದು ಅವರು ತಿಳಿಸಿದರು.

ತಾಲ್ಲೂಕಿನ ಕೋಣನತಲೆಯಿಂದ ಹರಿಹರ ತಾಲ್ಲೂಕಿಗೆ ಪಾದಯಾತ್ರೆಯನ್ನು ಬೀಳ್ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಎಂ. ವಾಸಪ್ಪ (ಮೊ: 8050399487) ಅವರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.