ADVERTISEMENT

ಹೊನ್ನಾಳಿ | ಅಕ್ರಮವಾಗಿ ಮರಳು ಸಾಗಣೆ: ನಾಲ್ಕು ಟ್ರ್ಯಾಕ್ಟರ್ ವಶ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:12 IST
Last Updated 27 ಅಕ್ಟೋಬರ್ 2024, 16:12 IST
ಹೊನ್ನಾಳಿ ತಾಲ್ಲೂಕಿನ ಹನಗವಾಡಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದ ನಾಲ್ಕು ಟ್ರ್ಯಾಕ್ಟರ್‌ಗಳನ್ನು ಸಿಪಿಐ ಸುನಿಲ್‍ಕುಮಾರ್ ವಶಪಡಿಸಿಕೊಂಡಿರುವುದು
ಹೊನ್ನಾಳಿ ತಾಲ್ಲೂಕಿನ ಹನಗವಾಡಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದ ನಾಲ್ಕು ಟ್ರ್ಯಾಕ್ಟರ್‌ಗಳನ್ನು ಸಿಪಿಐ ಸುನಿಲ್‍ಕುಮಾರ್ ವಶಪಡಿಸಿಕೊಂಡಿರುವುದು    

ಹೊನ್ನಾಳಿ: ತಾಲ್ಲೂಕಿನ ಹನಗವಾಡಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದ ನಾಲ್ಕು ಟ್ರ್ಯಾಕ್ಟರ್‌ಗಳನ್ನು ಸಿಪಿಐ ಸುನಿಲ್‍ಕುಮಾರ್ ಅವರು ತಮ್ಮ ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಪಿಐ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದು, ₹ 50,000 ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ. ಚಾಲಕರು  ಪರಾರಿಯಾಗಿದ್ದು, ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರು ಎಷ್ಟೇ ಬಲಾಢ್ಯರಾಗಿದ್ದರೂ ಕ್ರಮ ಜರುಗಿಸುವುದಾಗಿ ಸಿಪಿಐ ಹೇಳಿದರು.

ADVERTISEMENT

ತುಂಗಭದ್ರಾ ನದಿಯಿಂದ ಯಾರಾದರೂ ಮರಳನ್ನು ಸಾಗಿಸುತ್ತಿರುವುದು ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ಎಎಸ್‍ಐ ಹರೀಶ್, ಪೊಲೀಸ್ ಸಿಬ್ಬಂದಿ ಮಂಜುನಾಥ್, ಹೇಮನಾಯ್ಕ, ಮನೋಹರ್ ಹಾಗೂ ಪ್ರಸನ್ನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.