ಮಲೇಬೆನ್ನೂರು: ‘ಬಂಜೆತನ ಶಾಪ ಎಂದು ಗ್ರಹಿಸುವುದು ತಪ್ಪು’ ಎಂದು ದಾವಣಗೆರೆ ಕಡ್ಲಿ ಐವಿಎಫ್ ಸೆಂಟರ್‌ನ ಡಾ. ವರದಾ ಕಿರಣ್ ತಿಳಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ 8 ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಬಂಜೆತನ ಸಮಸ್ಯೆ ಕಾಣುತ್ತದೆ. ಸಾಮಾಜಿಕ ಸಮಸ್ಯೆಗೆ ಸಿಲುಕಿ ಹಲವರು ಮನೋವ್ಯಾಧಿಗೆ ತುತ್ತಾಗಿದ್ದಾರೆ. ವೈಜ್ಞಾನಿಕ ಯುಗದಲ್ಲೂ ನಕಲಿ ವೈದ್ಯರು, ಮಾಟ ಮಂತ್ರ, ಹರಕೆ, ಪೂಜೆ ಮೊರೆ ಹೋಗುತ್ತಿದ್ದಾರೆ. ಆದರೆ ಅತ್ಯಾಧುನಿಕ ಚಿಕಿತ್ಸೆ ಮೂಲಕ ಸಂತಾನ ಪಡೆಯಬಹುದು ಎಂದರು.
ಸರ್ಕಾರದ ಯಶಸ್ವಿನಿ, ಇಎಸ್‌ಐ, ಆಯುಷ್ನಾನ್ ವಿಮಾ ಯೋಜನೆ, ಅಡಿ ಚಿಕಿತ್ಸೆ ಲಭ್ಯವಿದೆ. ಸಂತಾನ ಸಮಸ್ಯೆ ಇರುವವರು ಇದರ ಲಾಭ ಪಡೆಯಬಹುದು ಎಂದು ಹೇಳಿದರು.
‘ಸಂಘಟನೆ ಮೂಲಕ ಜನರ ಆರೋಗ್ಯ ರಕ್ಷಣೆಗೆ ನೇತ್ರ, ಮಧುಮೇಹ, ಕಿಡ್ನಿ, ಹೃದಯ ರೋಗ , ಉಚಿತ ಅಂಗಾಂಗ ಜೋಡಣೆ ಇನ್ನಿತರ ಉಚಿತ ಶಿಬಿರ ಆಯೋಜಿಸುತ್ತಿದ್ದು, ಇದರ ಸದುಪಯೋಗ ಪಡೆಯಬೇಕು’ ಎಂದು ಲಯನ್ಸ್ ಕ್ಲಬ್ ಛೇರ್ಮನ್ ನಾಗರಾಜ್ ಚಿಟ್ಟಕ್ಕಿ ಮನವಿ ಮಾಡಿದರು.
ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಪಾರ್ವತಮ್ಮ, ಡಾ. ಎಚ್.ಜೆ. ಚಂದ್ರಕಾಂತ್, ಓ.ಜಿ. ರುದ್ರಗೌಡ, ಶಿವಾಜಿ ಪಾಟೀಲ್, ಬಸವನಗೌಡ್ರು, ಟಿಎಚ್‌ಒ ಡಾ. ಅಬ್ದುಲ್ ಖಾದರ್, ಡಾ. ಲಕ್ಷ್ಮಿದೇವಿ, ಮಂಜುಳಾ, ರೂಪಾ ಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.