ದಾವಣಗೆರೆ: ದೇಸಿಕ್ ಕೆ.ಎಸ್.ಕುಮಾರ್ (65; 78 ಎಸೆತ, 10 ಬೌಂಡರಿ) ಅವರ ಅರ್ಧಶತಕ ಹಾಗೂ ಗಿರಿಧರ ಎಂ.ಪೂಜಾರ್ (33ಕ್ಕೆ3) ಅವರ ಬಿಗುವಿನ ಬೌಲಿಂಗ್ ಬಲದಿಂದ ದಾವಣಗೆರೆ ಜಿಲ್ಲಾ ಇಲೆವನ್ ತಂಡ ಕೆಎಸ್‌ಸಿಎ ತುಮಕೂರು ವಲಯದ 14 ವರ್ಷದೊಳಗಿನವರ ಅಂತರ ಜಿಲ್ಲಾ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ‘ಹ್ಯಾಟ್ರಿಕ್’ ಸಾಧನೆ ಮಾಡಿದೆ.
ಇಲ್ಲಿನ ಎಂಬಿಎ ಟರ್ಫ್ ಅಂಗಳದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಾವಣಗೆರೆ ಇಲೆವನ್ 4 ವಿಕೆಟ್‌ಗಳಿಂದ ಬಳ್ಳಾರಿ ಜಿಲ್ಲಾ ಇಲೆವನ್ ತಂಡವನ್ನು ಸೋಲಿಸಿತು.
ಮೊದಲು ಬ್ಯಾಟ್ ಮಾಡಿದ ಬಳ್ಳಾರಿ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 217 ರನ್‌ಗಳನ್ನು ಕಲೆಹಾಕಿತು. ದಾವಣಗೆರೆ ತಂಡ 48.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಕೆಎಸ್‌ಸಿಎ ಮೈದಾನದಲ್ಲಿ ನಡೆದ ದಿನದ ಇನ್ನೊಂದು ಪಂದ್ಯದಲ್ಲಿ ಚಿತ್ರದುರ್ಗ ಜಿಲ್ಲಾ ಇಲೆವನ್ 29 ರನ್‌ಗಳಿಂದ ತುಮಕೂರು ಜಿಲ್ಲಾ ಇಲೆವನ್ ವಿರುದ್ಧ ವಿಜಯಿಯಾಯಿತು.
ಬಳ್ಳಾರಿ ಇಲೆವನ್: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 217 (ಕೊಂಡಾಪುರಂ ಗುರು ಚರಣ್ 92, ಪ್ರಣವ್ ಮೂರ್ತಿ 17, ಜಿ.ಮೊಹಮ್ಮದ್ ಶಕೀಬ್ ಹಸನ್ 45, ಗೊಲ್ಲ ವಿಶ್ವಕ್‌ಸೇನಾ 19; ಶ್ರೀನಿವಾಸ್ ಎಚ್ 56ಕ್ಕೆ1, ಮೊಹಮ್ಮದ್ ಯಾಸೀನ್ 6ಕ್ಕೆ1, ಗಿರಿಧರ ಎಂ.ಪೂಜಾರ್ 33ಕ್ಕೆ3, ಕಣವ್ ಡಿ.ಪಟೇಲ್ 26ಕ್ಕೆ2, ಶಿವರಾಜ್ ಆರ್ 35ಕ್ಕೆ1). ದಾವಣಗೆರೆ ಇಲೆವನ್; 48.5 ಓವರ್‌ಗಳಲ್ಲಿ 6 ವಿಕೆಟ್‌ಗೆ 218 (ದೇಸಿಕ್ ಕೆ.ಎಸ್.ಕುಮಾರ್ 65, ಮನೋಜ್ ಎಸ್.ಜಿ 34, ಮೊಹಮ್ಮದ್ ಯಾಸೀನ್ 32, ಶಿವರಾಜ್ ಆರ್ 21, ಸುಹಾಸ್ ಟಿ. ಔಟಾಗದೆ 12, ಶ್ರೀನಿವಾಸ್ ಎಚ್ 12; ಪ್ರಕಾಶ್ ಎಸ್ ಕ್ಯಾದಿಗುಂಪಿ 47ಕ್ಕೆ1, ವರುಣ್ ಸಂದೇಶ್ ರೆಡ್ಡಿ ಪಿ 29ಕ್ಕೆ1, ಜಿ.ಮೊಹಮ್ಮದ್ ಶಕೀಬ್ ಹಸನ್ 26ಕ್ಕೆ1). ಫಲಿತಾಂಶ: ದಾವಣಗೆರೆ ಇಲೆವನ್‌ಗೆ 4 ವಿಕೆಟ್‌ಗಳ ಗೆಲುವು.
45.2 ಓವರ್‌ಗಳಲ್ಲಿ 90 (ಮೊಹಮ್ಮದ್ ರೆಹಾನ್ ರಾಜಾ 26, ಗೌತಮ್ ಗೊಂಡಿ ಕೆ.ಟಿ 30: ಆಶಿತ್ ಸಂಜಯ್ ಗಿರೀಶ್ 12ಕ್ಕೆ1, ಆದಿತ್ಯ ಬಿ 14ಕ್ಕೆ3, ಗೌತಮ್ ಗೌಡ ವಿ 9ಕ್ಕೆ3, ಲಿಖಿತ್ ಟಿ.ಪಿ. 14ಕ್ಕೆ3). ತುಮಕೂರು ಜಿಲ್ಲಾ ಇಲೆವನ್: 19.1 ಓವರ್‌ಗಳಲ್ಲಿ 61 (ಪ್ರೇಮ್‌ಶಿವಾ ಎಸ್.ಕಬ್ಬೂರ್ 12, ಆಶಿತ್ ಸಂಜಯ್ ಗಿರೀಶ್ 9: ಕೈಲಾಸ್ ಕೆ.ಜೈನ್ 15ಕ್ಕೆ1, ಸಂಭ್ರಮ್ ಬಿ.ವಿ. 25ಕ್ಕೆ3, ಗೌತಮ್ ಗೊಂಡಿ ಕೆ.ಟಿ 8ಕ್ಕೆ3, ನಿಖಿಲ್ ಎಸ್ 13ಕ್ಕೆ1). ಫಲಿತಾಂಶ: ಚಿತ್ರದುರ್ಗ ಇಲೆವನ್‌ಗೆ 29 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.