ADVERTISEMENT

ಮಠಾಧೀಶರು ರಾಜಕೀಯ ಪ್ರತಿಕ್ರಿಯೆ ನೀಡುವುದು ತಪ್ಪಲ್ಲ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 17:22 IST
Last Updated 10 ಜುಲೈ 2024, 17:22 IST
<div class="paragraphs"><p>ಪೇಜಾವರ ಠದ ವಿಶ್ವ ಪ್ರಸನ್ನ ತೀರ್ಥ&nbsp; ಸ್ವಾಮೀಜಿ</p></div>

ಪೇಜಾವರ ಠದ ವಿಶ್ವ ಪ್ರಸನ್ನ ತೀರ್ಥ  ಸ್ವಾಮೀಜಿ

   

ದಾವಣಗೆರೆ: ಮಠಾಧೀಶರು ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡುವುದು ನನ್ನ ಪ್ರಕಾರ ತಪ್ಪಲ್ಲ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಠಾಧೀಶರು ಈ ದೇಶದ ಪ್ರಜೆಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಮಠಾಧೀಶರು ಮತ ಚಲಾವಣೆ ಮಾಡಿದ್ದಾರೆ. ಸಾಮಾನ್ಯ ಪ್ರಜೆ ರಾಜಕೀಯದ ಬಗ್ಗೆ ಮಾತನಾಡಬಹುದಾದರೆ ಮಠಾಧೀಶರು ಏಕೆ ಪ್ರತಿಕ್ರಿಯೆ ನೀಡಬಾರದು’ ಪ್ರಶ್ನಿಸಿದರು.

ADVERTISEMENT

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಿಂದುತ್ವದ ಕುರಿತು ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ಇದೊಂದು ಪ್ರಚೋದನಕಾರಿ ಭಾಷಣ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೀಗೆ ಮಾತನಾಡಬಾರದು. ಎರಡು ಪಂಗಡಳ ನಡುವೆ ದ್ವೇಷ ಸೃಷ್ಟಿಯಾದರೆ ಏನಾಗುತ್ತದೆ ಎಂಬುದಕ್ಕೆ ಮಣಿಪುರ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.