ಚನ್ನಗಿರಿ: ತಾಲ್ಲೂಕಿನ ಬುಳುಸಾಗರ ಗ್ರಾಮದ ಅಡಿಕೆ ವ್ಯಾಪಾರಿಯೊಬ್ಬರ ಮನೆ ಮೇಲೆ ಶುಕ್ರವಾರ ರಾತ್ರಿ ಐಟಿ ಅಧಿಕಾರಗಳ ತಂಡ ದಾಳಿ ನಡೆಸಿದ್ದು, ಶನಿವಾರವೂ ಕಾರ್ಯಾಚರಣೆ ನಡೆಸಿದರು.
ಗ್ರಾಮದ ಮಹಮದ್ ಖಲೀಮ್ ಹಾಗೂ ಅವರ ಸಹೋದರ ಬಾಬು ಅಲಿಯಾಸ್ ಜಾಕೀರ್ ಅಹಮದ್ ಖಾನ್ ಅವರ ಮನೆಗಳ ಮೇಲೆ ಬೆಂಗಳೂರು ಹಾಗೂ ದಾವಣಗೆರೆಯಿಂದ ಬಂದಿದ್ದ 20 ಜನ ಐಟಿ ಅಧಿಕಾರಿಗಳು ದಾಳಿ ನಡೆಸಿದರು.
ದಾಳಿಯಲ್ಲಿ ₹ 2 ಕೋಟಿಗಿಂತಲೂ ಅಧಿಕ ನಗದು ಹಾಗೂ 1 ಕೆ.ಜಿಗೂ ಅಧಿಕ ಬಂಗಾರದ ಆಭರಣಗಳು ಸಿಕ್ಕಿವೆ. ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಲೀಮ್ ಹಾಗೂ ಜಾಕೀರ್ ಅಹಮದ್ ಖಾನ್ 25ರಿಂದ 30 ವರ್ಷಗಳಿಂದ ಅಡಿಕೆ ವ್ಯಾಪಾರವನ್ನು ಮಾಡುತ್ತಿದ್ದು, ದಾವಣಗೆರೆ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ 100 ಎಕರೆಗಿಂತ ಹೆಚ್ಚು ಅಡಿಕೆ ತೋಟವನ್ನು ಹೊಂದಿದ್ದಾರೆ. ಸಹೋದರರು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅಡಿಕೆಯನ್ನು ಖರೀದಿ ಮಾಡಿ, ದೆಹಲಿ, ಆಗ್ರಾ, ಸೂರತ್ ಸೇರಿದಂತೆ ಹಲವು ಪ್ರದೇಶಗಳಿಗೆ ಸಾಗಿಸುತ್ತಿದ್ದರು ಎಂಬ ಮಾಹಿತಿ ಇದೆ. ಸಹೋದರು ₹ 3 ಕೋಟಿ ಬೆಲೆ ಬಾಳುವ ಐಷಾರಾಮಿ ಮನೆ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.