ADVERTISEMENT

ಹಲವು ವರ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿ; ಈಗ ಮತದಾರ ಪಟ್ಟಿಯಲ್ಲಿ ಹೆಸರೇ ಇಲ್ಲ!

ನೊಂದುಕೊಂಡ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 9:41 IST
Last Updated 23 ಏಪ್ರಿಲ್ 2019, 9:41 IST
   

ದಾವಣಗೆರೆ: ‘33 ವರ್ಷ ಸರ್ಕಾರಿ ಸೇವೆಯಲ್ಲಿದ್ದುಕೊಂಡು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದೆ. ಮಸ್ಟರಿಂಗ್‌, ಡಿಮಸ್ಟರಿಂಗ್‌ ನಡೆಸಿದ್ದೆ. ಜತೆಗೆ ಪ್ರತಿಬಾರಿಯೂ ಮತ ಚಲಾಯಿಸಿದ್ದೆ. ಈ ಬಾರಿ ನನ್ನ ಹೆಸರೇ ಪಟ್ಟಿಯಲ್ಲಿ ಇಲ್ಲ’ ಎಂದು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಶಿವಕುಮಾರ ಬಡಾವಣೆ ನಿವಾಸಿ ಜಿ. ಚಂದ್ರಯ್ಯ ನೊಂದುಕೊಂಡರು.

ಶಿವಕುಮಾರ ಬಡಾವಣೆಯ ಸೇಂಟ್‌ ಜಾನ್ಸ್‌ ಶಾಲೆಯಲ್ಲಿ ಮತ ಚಲಾಯಿಸಲೆಂದು ಬಂದು ಹೆಸರಿಲ್ಲದೇ ವಾಪಸ್ಸಾದರು.

‘ನಮ್ಮ ಕುಟುಂಬದಲ್ಲಿ 8 ಮಂದಿ ಮತದಾರರಿದ್ದೇವೆ. ನನ್ನೊಬ್ಬನನ್ನು ಬಿಟ್ಟು ಉಳಿದ ಏಳು ಮಂದಿಯ ಹೆಸರು ಇದೆ. ನನ್ನ ಹೆಸರು ಯಾಕೆ ಡಿಲಿಟ್‌ ಮಾಡಿದರು ಎಂಬುದು ಗೊತ್ತಾಗುತ್ತಿಲ್ಲ. ಇದನ್ನು ಇಲ್ಲಿಗೆ ಬಿಡುವುದಿಲ್ಲ. ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿ ಕೇಳುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.