ADVERTISEMENT

ದಾವಣಗೆರೆ | ಉತ್ತಮ ಮಳೆ: ರೈತರ ಹರ್ಷ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:51 IST
Last Updated 13 ಜೂನ್ 2024, 15:51 IST
ದಾವಣಗೆರೆಯಲ್ಲಿ ಗುರುವಾರ ಹದ ವರ್ಷಧಾರೆಯಾಗಿದ್ದು, ಜಯದೇವ ವೃತ್ತದಲ್ಲಿ ನಿಂತ ನೀರಿನಲ್ಲೇ ದ್ವಿಚಕ್ರ ವಾಹನ ಸವಾರರೊಬ್ಬರು ಸಾಗಿದ್ದು ಹೀಗೆ.. 
ದಾವಣಗೆರೆಯಲ್ಲಿ ಗುರುವಾರ ಹದ ವರ್ಷಧಾರೆಯಾಗಿದ್ದು, ಜಯದೇವ ವೃತ್ತದಲ್ಲಿ ನಿಂತ ನೀರಿನಲ್ಲೇ ದ್ವಿಚಕ್ರ ವಾಹನ ಸವಾರರೊಬ್ಬರು ಸಾಗಿದ್ದು ಹೀಗೆ..    

ದಾವಣಗೆರೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಕೆಲಕಾಲ ಉತ್ತಮ ಮಳೆಯಾಯಿತು. ಕೆಲ ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆ ಗುರುವಾರ ಹದವಾಗಿ ಸುರಿದ ಕಾರಣ ರೈತರಲ್ಲಿ ಮಂದಹಾಸ ಮೂಡಿದೆ.

ನಗರದಲ್ಲಿ ಸುರಿದ ವರ್ಷಧಾರೆಯಿಂದ ಹಲವೆಡೆಯ ರಸ್ತೆಯಲ್ಲಿ ನೀರು ನಿಂತಿತ್ತು. ಇಲ್ಲಿನ ಹೈಸ್ಕೂಲ್‌ ಮೈದಾನದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಒಂದು ಅಡಿಗೂ ಹೆಚ್ಚು ಆಳ ನೀರು ನಿಂತಿದ್ದರಿಂದ ಪ್ರಯಾಣಿಕರು, ಬಸ್‌ ಹಾಗೂ ಆಟೊ ಚಾಲಕರು ಪರದಾಡಿದರು.

ಬಸ್‌, ಆಟೊಗಳು ಅಲ್ಲಿಯೇ ನಿಲ್ಲುತ್ತಿದ್ದರಿಂದ ಪ್ರಯಾಣಿಕರು ನೀರಿನಲ್ಲಿ ನಿಲ್ಲುವಂತಾಗಿ ತೊಂದರೆ ಅನುಭವಿಸುವಂತಾಯಿತು. ನಗರದ ಹಲವು ಪ್ರದೇಶಗಳಲ್ಲಿ ನೀರು ನಿಂತ ಕಾರಣ ನಿವಾಸಿಗಳು ಪರದಾಡಿದರು. ಜಯದೇವ ವೃತ್ತ, ವಿದ್ಯಾರ್ಥಿ ಭವನ ಸರ್ಕಲ್‌ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಸಮಸ್ಯೆ ಎದುರಿಸುವಂತಾಯಿತು.

ADVERTISEMENT

ಹದ ಮಳೆಯಿಂದ ಬಿತ್ತನೆಗೆ ಅನುಕೂಲವಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.