ADVERTISEMENT

ಕೆರೆಗಳು ಜೀವ ವೈವಿಧ್ಯದ ತಾಣಗಳು: ವೀರೇಶ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 12:44 IST
Last Updated 22 ಡಿಸೆಂಬರ್ 2023, 12:44 IST
ಸಂತೇಬೆನ್ನೂರು ಐತಿಹಾಸಿಕ ಕೆರೆಗೆ ಈಚೆಗೆ ದಾವಣಗೆರೆ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿ ಅಧ್ಯಯನ ನಡೆಸಿದರು
ಸಂತೇಬೆನ್ನೂರು ಐತಿಹಾಸಿಕ ಕೆರೆಗೆ ಈಚೆಗೆ ದಾವಣಗೆರೆ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿ ಅಧ್ಯಯನ ನಡೆಸಿದರು   

ಸಂತೇಬೆನ್ನೂರು: ‘ಕೆರೆ, ಕಟ್ಟೆಗಳಲ್ಲಿ ನೀರು, ಹಸಿರು ಹರಡಿದ ಪರಿಸರ, ಪ್ರಾಣಿ, ಪಕ್ಷಿಗಳ ಜೀವ ವೈವಿಧ್ಯ ಪ್ರಕೃತಿಯ ಅಮೂಲ್ಯ ಕೊಡುಗೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೀರೇಶ್ ಹೇಳಿದರು.

ಇಲ್ಲಿನ ಐತಿಹಾಸಿಕ ಕೆರೆಗೆ ಈಚೆಗೆ ದಾವಣಗೆರೆ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.

‘ಕೆರೆಗಳು ಅಂತರ್ಜಲ ವೃದ್ಧಿಸುತ್ತವೆ. ಮೀನು ಸಾಕಾಣಿಕೆಗೆ ಪೂರಕ ಜಲ ಮೂಲ. ಮಣ್ಣಿನ ಸವಕಲು ತಡೆಯುವ ಮೂಲಕ ಫಲವತ್ತತೆ ಉಳಿಸುತ್ತವೆ. ದನ– ಕರುಗಳಿಗೆ ಬೇಸಿಗೆಯಲ್ಲಿ ನೀರುಣಿಸುವ ಪ್ರಮುಖ ತಾಣಗಳು. ರಾಜಕಾಲುವೆಗಳ ತಿರುವಿನಿಂದ ಕೆರೆಗಳಿಗೆ ಸಮರ್ಪಕ ನೀರು ಸೇರುತ್ತಿಲ್ಲ. ಒತ್ತುವರಿಯಿಂದ ಸಂಗ್ರಹಣ ಸಾಮರ್ಥ್ಯ ಕುಸಿಯುತ್ತಿದೆ. ಕೆರೆ ಅಭಿವೃದ್ಧಿಗೆ ಹಲವು ಯೋಜನೆಗಳಿವೆ. ಅವುಗಳ ಮೂಲಕ ಗ್ರಾಮಗಳ ಕೆರೆ ಉಳಿಸಬೇಕು’ ಎಂದು ಹೇಳಿದರು.

ADVERTISEMENT

ಶಾರದಾ ಕಳ್ಳಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.