ADVERTISEMENT

ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಪುತ್ರನ ವಿರುದ್ಧ ದೂರು

ಸುಳ್ಳು ದಾಖಲೆ ಸೃಷ್ಟಿಸಿ ಗ್ರಾ.ಪಂ ಚುನಾವಣೆಗೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 4:09 IST
Last Updated 8 ಆಗಸ್ಟ್ 2020, 4:09 IST
ಪಿ.ಟಿ. ಪರಮೇಶ್ವರ ನಾಯ್ಕ
ಪಿ.ಟಿ. ಪರಮೇಶ್ವರ ನಾಯ್ಕ   

ಉಚ್ಚಂಗಿದುರ್ಗ: ಪುತ್ರನ ವಯಸ್ಸಿನ ಸುಳ್ಳು ದಾಖಲೆ ಸೃಷ್ಟಿಸಿಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಹಾಗೂ ದೂರುದಾರರಿಗೆ ಜೀವ ಬೆದರಿಕೆ ಹಾಕಿದಆರೋಪದಡಿ ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಪುತ್ರ ಪಿ.ಟಿ. ಭರತ್ ಹಾಗೂ ಮುಖ್ಯಶಿಕ್ಷಕ ರಾಜ ಸೋಮಶೇಖರ ನಾಯಕ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.

2015ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಲು ಪರಮೇಶ್ವರ ನಾಯ್ಕ ಅವರ ಪುತ್ರ ಪಿ.ಟಿ. ಭರತ್ ವಯಸ್ಸಿನ ಕುರಿತು ಸುಳ್ಳು ದಾಖಲೆ ಸಲ್ಲಿಸಿದ್ದರು.

‘ಪುತ್ರನಿಗೆ 21 ವರ್ಷ ಆಗದ ಕಾರಣ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ತಮ್ಮ ಪ್ರಭಾವ ಬಳಸಿ ಶಾಲಾ ದಾಖಲಾತಿಯಲ್ಲಿ ನಮೂದಾಗಿದ್ದ ಜನ್ಮದಿನಾಂಕವನ್ನು ತಿದ್ದಿಸಿ, 21 ವರ್ಷಕ್ಕೆ ಬದಲಾಯಿಸಿಕೊಂಡಿದ್ದರು. ಸುಳ್ಳು ದಾಖಲೆ ಸಲ್ಲಿಸಿ 5 ವರ್ಷ ಪಂಚಾಯಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಡಿ.ಲಿಂಬಾನಾಯ್ಕ ಎಂಬುವವರು ದೂರು ದಾಖಲಿಸಿದ್ದರು.

ADVERTISEMENT

‘ಕಕ್ಷಿದಾರ ಲಿಂಬಾನಾಯ್ಕ ಅವರಿಗೆ ಜೀವ ಬೆದರಿಕೆ ಇದ್ದು, ‌ಭದ್ರತೆ ಒದಗಿಸಬೇಕು’ ಎಂದು ಅವರ ಪರ ವಕೀಲ ರೇವನಗೌಡ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇನ್‌ಸ್ಪೆಕ್ಟರ್‌ ಕೆ.ಕುಮಾರ್ ನೇತೃತ್ವದ ತಂಡ ತನಿಖೆ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.