ADVERTISEMENT

ಹರಿಹರ: ಲೋಕಾಯುಕ್ತ ಬಲೆಗೆ ಬಿದ್ದ ಪೌರಾಯುಕ್ತ

ಬ್ಲೀಚಿಂಗ್‌ ಪೌಡರ್‌ ಪೂರೈಸಿದ್ದ ಗುತ್ತಿಗೆದಾರರಿಂದ ಲಂಚ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 19:38 IST
Last Updated 8 ಜುಲೈ 2024, 19:38 IST
ಬಸವರಾಜ ಐಗೂರು
ಬಸವರಾಜ ಐಗೂರು   

ಹರಿಹರ: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುವಾಗ ಇಲ್ಲಿನ ನಗರಸಭೆ ಆಯುಕ್ತ ಬಸವರಾಜ ಐಗೂರ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹರಿಹರ ನಗರಸಭೆ ವ್ಯಾಪ್ತಿಯ ನೀರು ಶುದ್ಧೀಕರಣ ಘಟಕಗಳಿಗೆ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಪೂರೈಸಿದ್ದ ಗುತ್ತಿಗೆದಾರ ಎಚ್‌.ಕರಿಬಸಪ್ಪ ಅವರಿಗೆ ₹ 25.30 ಲಕ್ಷದ ಬಿಲ್ ಮಂಜೂರು ಮಾಡಲು ಬಸವರಾಜ ಐಗೂರ ₹ 2 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು.

ಈ ಬಗ್ಗೆ ಕರಿಬಸಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ₹ 2 ಲಕ್ಷ ಲಂಚ ಪಡೆಯುವಾಗಲೇ ಬಸವರಾಜ ಐಗೂರ ಅವರನ್ನು ಬಂಧಿಸಿದ್ದಾರೆ.

ADVERTISEMENT

ಕೆಡಿಪಿ ಸಭೆಗೆ ಗೈರು:

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದ ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಪಿ.ಹರೀಶ್ ಅವರು, ‘ಸಭೆಗೆ ಪೌರಾಯುಕ್ತ ಐಗೂರ ಏಕೆ ಬಂದಿಲ್ಲ’ ಎಂದು ಪ್ರಶ್ನಿಸಿದ್ದರು. ‘ನಗರಸಭೆಗೆ ಸಂಬಂಧಿಸಿದ ಲೋಕಾಯುಕ್ತ ಪ್ರಕರಣದ ವಿಚಾರಣೆಗೆ ಬೆಂಗಳೂರಿಗೆ ಹೋಗಿದ್ದಾರೆ’ ಎಂದು ಎಇಇ ತಿಪ್ಪೇಶಪ್ಪ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.