ಕಡರನಾಯ್ಕನಹಳ್ಳಿ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸಮೀಪದ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ದರ್ಶನಕ್ಕೆ ಸಾವಿರಾರು ಭಕ್ತರು ಸೇರಿದ್ದರು.
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಕರಿಬಸವೇಶ್ವರಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆ ನಡೆದವು.
ಭಕ್ತರು ಸ್ನಾನಘಟ್ಟದಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದರು. ತಲೆಯ ಮೇಲೆ ಕೆಲವರು ಅಜ್ಜಯ್ಯನ ಭಾವಚಿತ್ರ ಹೊತ್ತರೆ, ಮತ್ತೆ ಕೆಲವರು ಕಲ್ಲು ಹೊತ್ತು ಹರಕೆ ತೀರಿಸಿದರು.
ಕಳೆದ ಬಾರಿ ಹರಕೆ ಕಟ್ಟಿಕೊಂಡ ಭಕ್ತರು ಹರಿಕೆ ತೀರಿಸಿದರು. ಮಹಿಳೆಯರು, ಮಕ್ಕಳು ದೀಡ್ ನಮಸ್ಕಾರ ಸೇವೆ ಸಲ್ಲಿದರು.
ಭೂತ ಪ್ರೇತ ಆವಾಹನೆ ಆದವರು ಅಜ್ಜಯ್ಯನ ಸನ್ನಿಧಿಯ ಅನತಿ ದೂರದಲ್ಲಿ ‘ಅಜ್ಜಯ್ಯ ಬಿಡು, ನನ್ನ ಕಾಡಬೇಡ’ ಎಂದು ಕೂಗುತ್ತಿದ್ದುದು ಕಂಡುಬಂತು.
ಭೂತ, ಪ್ರೇತ ನಿವಾರಣೆ, ವ್ಯಾಜ್ಯ, ಕಂಕಣಭಾಗ್ಯ, ಸಂತಾನ ಭಾಗ್ಯ, ಉದ್ಯೋಗ, ರೋಗಗಳ, ಪರಿಹರಿಸುವವನು ಅಜ್ಜಯ್ಯ ಎಂಬ ನಂಬಿಕೆಯಿದೆ. ಪರಿಹಾರ ಕಂಡವರು ಬಂದು ಹರಕೆ ತೀರಿಸುವುದು, ಮುಡಿ ತೆಗೆಯಿಸುವುದು ವಾಡಿಕೆ.
ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಉಕ್ಕಡಗಾತ್ರಿಗೆ ಬಂದು ಅಜ್ಯಯ್ಯನ ದರ್ಶನ ಪಡೆದರು.
ಅಜ್ಜಯ್ಯನ ಪಂಚ ಫಳಾರ, ನಿಂಬೆಹಣ್ಣುಗಳ ಮಾರಾಟ ಜೋರಾಗಿತ್ತು.
ದೇವಸ್ಥಾನದ ಟ್ರಸ್ಟ್ ವತಿಯಿಂದ ವಸತಿ ಗೃಹ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.