ADVERTISEMENT

ಸಂಕ್ರಾಂತಿ: ಅಜ್ಜಯ್ಯನ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 5:09 IST
Last Updated 16 ಜನವರಿ 2024, 5:09 IST
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿಯ ತುಂಗಾಭದ್ರಾ ನದಿ ದಡದಲ್ಲಿ ಕುಟುಂಬವೊಂದು ಸಾಮೂಹಿಕವಾಗಿ ಭೋಜನ ಸವಿದರು
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿಯ ತುಂಗಾಭದ್ರಾ ನದಿ ದಡದಲ್ಲಿ ಕುಟುಂಬವೊಂದು ಸಾಮೂಹಿಕವಾಗಿ ಭೋಜನ ಸವಿದರು   

ಕಡರನಾಯ್ಕನಹಳ್ಳಿ: ಸಮೀಪದ ಉಕ್ಕಡಗಾತ್ರಿ, ಭೈರನಪಾದ, ದೂಳೆಹೊಳೆಯಲ್ಲಿ ರೈತರು ಕುಟುಂಬ ಸಮೇತ ಸಾಮೂಹಿಕವಾಗಿ ಸಂಕ್ರಾಂತಿ ಆಚರಿಸಿದರು.

ಉಕ್ಕಡಗಾತ್ರಿ ಗ್ರಾಮದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಭಕ್ತರು ಸ್ನಾನ ಮಾಡಿ ಅಜ್ಜಯ್ಯನ ದರ್ಶನ ಪಡೆದರು. ಎಲ್ಲರಿಗೂ ಎಳ್ಳು ಬೆಲ್ಲ ಹಂಚಿ ಹಬ್ಬದ ಶುಭಾಶಯ ಕೋರಿದರು. ನಂತರ ನದಿ ದಡದಲ್ಲಿ ಕುಳಿತು ಮನೆಯಿಂದ ತಂದಿದ್ದ ರೊಟ್ಟಿ, ಪಲ್ಯ, ಪುಡಿಚಟ್ನಿ, ಮೊಸರುಬುತ್ತಿ ವಿವಿಧ ಬಗೆಯ ಸಿಹಿಯನ್ನು ಸವಿದು ಖುಷಿ ಪಟ್ಟರು.

ಸಮೀಪದ ಭೈರನಪಾದದಲ್ಲಿ ಭಕ್ತರು ಭೈರವನ ದರ್ಶನ ಪಡೆದು ಸಂಕ್ರಾಂತಿ ಆಚರಿಸಿದರು. ದೂಳೆಹೊಳೆ ಗ್ರಾಮದಲ್ಲಿ ಹರಪನಹಳ್ಳಿಯ ತೆಗ್ಗಿನ ಮಠ ಮಹಾಸಂಸ್ಥಾನ ಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸಾಮೂಹಿಕವಾಗಿ ಸಂಕ್ರಾಂತಿ ಆಚರಿಸಿದರು.

ADVERTISEMENT
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಸಂಕ್ರಾಂತಿ ಪ್ರಯುಕ್ತ ಸ್ನಾನ ಮಾಡಿದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.