ADVERTISEMENT

ರಂಗಕಲಾವಿದೆ ಮನೂಬಾಯಿ ನಾಕೋಡ ನಿಧನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:01 IST
Last Updated 28 ಅಕ್ಟೋಬರ್ 2018, 20:01 IST
ಮನೂಬಾಯಿ ನಾಕೋಡ
ಮನೂಬಾಯಿ ನಾಕೋಡ   

ದಾವಣಗೆರೆ: ಇಲ್ಲಿನ ವಿನಾಯಕನಗರದಲ್ಲಿ ಹಿರಿಯ ರಂಗಕಲಾವಿದೆ ಮನೂಬಾಯಿ ನಾಕೋಡ ಜ್ವರದಿಂದಾಗಿ (85) ಭಾನುವಾರ ರಾತ್ರಿ ನಿಧನರಾದರು.

ಅವರಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಸೋಮವಾರ ಮಧ್ಯಾಹ್ನ 2ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.

ಅವರು ನಾಟಕ ಅಕಾಡೆಮಿಯ ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕೃತರಾಗಿದ್ದರು. ಪತಿ ವಸಂತಸಾ ನಾಕೋಡ ಅವರು ಆರಂಭಿಸಿದ್ದ ವಸಂತ ಕಲಾ ನಾಟ್ಯ ಸಂಘ, ಗುಡಿಗೇರಿ ಬಸವರಾಜ ಕಂಪನಿ, ದೊಡ್ಡಗುಬ್ಬಿ ಮುದುವೀರಾಚಾರ ಕಂಪನಿ ಸೇರಿ ಹಲವು ಕಂಪನಿಗಳ ನಾಟಕಗಳಲ್ಲಿ ಅವರು ಅಭಿನಯಿಸಿದ್ದರು.

ADVERTISEMENT

‘ಬಾಣಸಿಗ ಭೀಮ’, ‘ಚಿತ್ರಾಂಗದೆ’, ‘ಲಂಕಾದಹನ’, ‘ಕಿತ್ತೂರು ಚನ್ನಮ್ಮ’, ‘ಮಹಾಸತಿ ಅನಸೂಯಾ’, ‘ರಾಜಾ ಹರಿಶ್ಚಂದ್ರ’, ‘ಟಿಪ್ಪು ಸುಲ್ತಾನ್‌’, ‘ಹೇಮರಡ್ಡಿ ಮಲ್ಲಮ್ಮ’ ಇವು ಅವರು ನಟಿಸಿದ ಜನಪ್ರಿಯ ನಾಟಕಗಳು.

ತಾರಾಬಾಯಿ–ಮನೂಬಾಯಿ ಸಹೋದರಿಯರು ರಂಗಭೂಮಿಯಲ್ಲಿ ಹೆಸರುವಾಸಿಯಾಗಿದ್ದರು. ಚಲನಚಿತ್ರ ನಟರಾದ ಉದಯಕುಮಾರ್‌, ರಾಜೇಶ್‌, ಕಲ್ಯಾಣಕುಮಾರ್‌, ಜಿ.ವಿ. ಅಯ್ಯರ್‌ ಜೊತೆಗೂ ಅನೇಕ ನಾಟಕಗಳಲ್ಲಿಯೂ ಮನೂಬಾಯಿ ಅಭಿನಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.