ADVERTISEMENT

ಹೊಸ ವಕ್ಫ್ ಮಸೂದೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:36 IST
Last Updated 24 ಸೆಪ್ಟೆಂಬರ್ 2024, 15:36 IST
ಮಲೇಬೆನ್ನೂರು ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು
ಮಲೇಬೆನ್ನೂರು ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು    

ಮಲೇಬೆನ್ನೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ 2024ರ ವಕ್ಫ್ ಮಸೂದೆ ವಿರೋಧಿಸಿ ಮುಸ್ಲಿಂ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.

ಹಜರತ್ ಸೈಯ್ಯದ್ ಹಬೀಬುಲ್ಲ ಷಾ ಖಾದ್ರಿ ಅವರ ದರ್ಗಾ ಮೈದಾನದಿಂದ ನಾಡಕಚೇರಿವರೆಗೆ ಮುಸ್ಲಿಂ ಸಮುದಾಯದವರು ಮೆರವಣಿಗೆ ನಡೆಸಿದರು. ಬಳಿಕ ಉಪ ತಹಶೀಲ್ದಾರ್ ರವಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಪುರಸಭಾ ಸದಸ್ಯ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಾಬೀರ್ ಅಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ADVERTISEMENT

ಪುರಸಭಾ ಸದಸ್ಯರಾದ ಖಲೀಲ್ ನಯಾಜ್, ಬುಡ್ಡವರ್ ರಫೀಕ್, ಎಂ.ಬಿ ರುಸ್ತುಮ್, ದಾದಾಪೀರ್, ಷಾ ಅಬ್ರಾರ ಮಾಜಿ ಸದಸ್ಯರಾದ ಅರಿಫ್ ಅಲಿ, ಎ.ದಾದಾವಲಿ, ಯೂಸುಫ್ ಖಾನ್ ಹಾಗೂ ಮುಸ್ಲಿಂ ಮುಖಂಡರಾದ ಸೈಯ್ಯದ್ ಜಾಕೀರ್, ಬುಡ್ಡವರ್ ಸೈಫುಲ್ಲ, ಸುಲ್ತಾನ್ ಹುಸೈನ್, ಶಾ ಬಾಜ್, ಶಫಿಉಲ್ಲಾ, ಹಬೀಬುಲ್ಲ, ಅಯೂಬ್ ಖಾನ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪೊಲೀಸರು ಭದ್ರತೆ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.