ADVERTISEMENT

ಹೊನ್ನಾಳಿ: ಶಿಕ್ಷಕರ ಕ್ಷೇತ್ರದಲ್ಲಿ ಶೇ 90ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 15:21 IST
Last Updated 3 ಜೂನ್ 2024, 15:21 IST
ಹೊನ್ನಾಳಿ ತಾಲ್ಲೂಕು ಕಚೇರಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪದವೀಧರರು ಸರತಿ ಸಾಲಿನಲ್ಲಿ ನಿಂತು  ಮತ ಚಲಾಯಿಸಿದರು
ಹೊನ್ನಾಳಿ ತಾಲ್ಲೂಕು ಕಚೇರಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪದವೀಧರರು ಸರತಿ ಸಾಲಿನಲ್ಲಿ ನಿಂತು  ಮತ ಚಲಾಯಿಸಿದರು    

ಹೊನ್ನಾಳಿ: ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆಯಿತು. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 90.93ರಷ್ಟು ಮತದಾನ ನಡೆದರೆ, ಪದವೀದರ ಕ್ಷೇತ್ರದಲ್ಲಿ ಶೇ 80.92ರಷ್ಟು ಮತದಾನವಾಗಿದೆ ಎಂದು ಉಪ ವಿಭಾಗಾಧಿಕಾರಿ ಅಭಿಷೇಕ್ ಮಾಹಿತಿ ನೀಡಿದರು.

ಹೊನ್ನಾಳಿ ತಾಲ್ಲೂಕು ಕಚೇರಿಯಲ್ಲಿ ಪದವೀದರ ಕ್ಷೇತ್ರಕ್ಕೆ ಮೂರು, ಶಿಕ್ಷಕರ ಕ್ಷೇತ್ರಕ್ಕೆ ಒಂದು ಮತಗಟ್ಟೆ ಸೇರಿ ಒಟ್ಟು 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ತಾಲ್ಲೂಕಿನಲ್ಲಿ ಒಟ್ಟು 3,216 ಪದವೀಧರ ಮತದಾರರಿದ್ದು, ಅದರಲ್ಲಿ 2,582 ಮತದಾರರು ಮತ ಚಲಾಯಿಸಿದರು. 395 ಶಿಕ್ಷಕ ಮತದಾರರಿದ್ದು, ಅದರಲ್ಲಿ 361 ಮತದಾರರು ಮತ ಚಲಾಯಿಸಿದರು ಎಂದು ತಹಶೀಲ್ದಾರ್ ಪುರಂದರಹೆಗ್ಡೆ ತಿಳಿಸಿದರು.

ADVERTISEMENT

ನ್ಯಾಮತಿ ವರದಿ: ತಾಲ್ಲೂಕಿನಲ್ಲಿ ಪದವೀಧರ ಕ್ಷೇತ್ರದಲ್ಲಿ ಒಟ್ಟು 1,012 ಮತದಾರರಿದ್ದು, 804 ಮತದಾರರು ಮತ ಚಲಾಯಿಸಿದ್ದಾರೆ. ಶೇ 79.44ರಷ್ಟು ಮತದಾನವಾಗಿದೆ.

ನ್ಯಾಮತಿ ತಾಲ್ಲೂಕು ಕಚೇರಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಪದವೀದರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.  ( ಫೋಟೋ ಕ್ಯಾಪ್ಶನ್ ಮಾಡುವಂತೆ ಅವರು ಮನವಿ ಮಾಡಿದ್ದಾರೆ ಮೇಡಂ ) 

ಅದೇ ರೀತಿ ಶಿಕ್ಷಕರ ಕ್ಷೇತ್ರದಲ್ಲಿ 76 ಮತದಾರರಿದ್ದು, 71 ಮತದಾರರು ಶಿಕ್ಷಕರು ಹಕ್ಕು ಚಲಾಯಿಸಿದ್ದಾರೆ. ಶೇ 93.42ರಷ್ಟು ಮತದಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.