ದಾವಣಗೆರೆ: ಕಲಾನಿಕೇತನ ಕಾಲೇಜ್ ಆಫ್ ಫ್ಯಾಷನ್ ಡಿಸೈನಿಂಗ್ ವತಿಯಿಂದ ಮಹಿಳಾ ಯುವ ರೂಪದರ್ಶಿ ಸ್ಪರ್ಧೆ ಆಯ್ಕೆ ಪ್ರಕ್ರಿಯೆ ಮತ್ತು ಕಲಾ ಕೃತಿಕ-2023 ಫ್ಯಾಷನ್ ಶೋ ಜು.9ರಂದು ಬೆಳಿಗ್ಗೆ 10.30ಕ್ಕೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ತಾವುಗಳೇ ವಿನ್ಯಾಸಗೊಳಿಸಿದ ವೈವಿಧ್ಯಮಯ ಮತ್ತು ಕಲಾತ್ಮಕ ವಸ್ತ್ರ ವಿನ್ಯಾಸ ಪ್ರದರ್ಶನ ಹಾಗೂ ಯುವತಿಯರಿಗೆ ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಲು ವೇದಿಕೆ ಕಲ್ಪಿಸಲಾಗಿದ್ದು, 16ರಿಂದ 28ವರ್ಷದೊಳಗಿನ ಯುವತಿಯರು ಆಡಿಷನ್ ನೀಡಬಹುದಾಗಿದೆ.
ಮಾಡೆಲ್ ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಬಯಸುವ ಯುವತಿಯರು ಮೊಬೈಲ್ ಸಂಖ್ಯೆ 9538179129, 7892133211 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.