ADVERTISEMENT

ಮೂಲಸೌಕರ್ಯ ಕಲ್ಪಿಸುವ ಮಹತ್ತರ ಕಾರ್ಯ: ಸಂಸದ ಜಿ.ಎಂ.ಸಿದ್ದೇಶ್ವರ

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 5:23 IST
Last Updated 13 ಮಾರ್ಚ್ 2024, 5:23 IST
<div class="paragraphs"><p>ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ ನವೀಕರಣ ಫಲಕವನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು</p></div>

ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ ನವೀಕರಣ ಫಲಕವನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು

   

ದಾವಣಗೆರೆ: ‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಕಲ್ಪಿಸುವ ಮಹತ್ತರ ಪ್ರಯತ್ನವು ದೇಶಾದ್ಯಂತ ನಡೆಯುತ್ತಿದೆ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ನಗರದ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ‘ಒಂದು ನಿಲ್ದಾಣ ಒಂದು ಉತ್ಪನ್ನ’ ನವೀಕರಣ ಫಲಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಇಂದು ಭಾರತೀಯ ರೈಲ್ವೆಗೆ ಸಂಬಂಧಿಸಿದ 6,000ಕ್ಕೂ ಹೆಚ್ಚು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ದೇಶಾದ್ಯಂತ ನೆರವೇರಿಸಲಾಗುತ್ತಿದೆ. ಇದರ ಮೌಲ್ಯ ₹ 85,000 ಕೋಟಿಗಿಂತಲೂ ಹೆಚ್ಚಿದೆ ಎಂದು ತಿಳಿಸಿದರು.

‘ಭಾರತವು ಈಗ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ರೈಲು ಜಾಲ ವ್ಯವಸ್ಥೆಯನ್ನು ಹೊಂದಿದೆ. ರಾಜ್ಯದ 44ಕ್ಕೂ ಹೆಚ್ಚು ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

‘ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಂದೇ ಭಾರತ್ ರೈಲುಗಳು ದೇಶದ ಉದ್ದಗಲಕ್ಕೂ ಸಂಚರಿಸುತ್ತವೆ. ಕಳೆದ ದಶಕದಲ್ಲಿ ದೇಶಾದ್ಯಂತ 30,000 ಕಿ.ಮೀ. ಗಿಂತ ಹೆಚ್ಚು ಹೊಸ ರೈಲ್ವೆ ಮಾರ್ಗಗಳು, ಗೇಜ್ ಪರಿವರ್ತನೆ ಮತ್ತು ರೈಲ್ವೆ ಮಾರ್ಗಗಳ ದ್ವಿಪಥ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಹರಿಹರ ಶಾಸಕ ಬಿ.ಪಿ.ಹರೀಶ್, ಹರಿಹರ ನಾಗರಿಕ ಸಲಹಾ ಸಮಿತಿ ಸದಸ್ಯರಾದ ಸಾವಿತ್ರಮ್ಮ, ರೈಲ್ವೆ ಅಧಿಕಾರಿಗಳಾದ ಉಮೇಶ್ ನಾಯ್ಕ, ಮುಖಂಡರಾದ ಯಶವಂತ ಜಾಧವ್, ಗಾಯಿತ್ರಿ ಸಿದ್ದೇಶ್ವರ, ಯಶೋಧ ಯಗ್ಗಪ್ಪ, ಪ್ರಶಾಂತ ಕುಮಾರ್, ಜಿ.ಎಸ್.ಶ್ಯಾಮ್ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.