ADVERTISEMENT

ಮುಕ್ತೇನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಸವಿತಾ ನಾಗರಾಜ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 16:37 IST
Last Updated 15 ನವೆಂಬರ್ 2024, 16:37 IST
ಹೊನ್ನಾಳಿ ತಾಲ್ಲೂಕು ಮುಕ್ತೇನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ನಾಗರಾಜ್ ಅವರನ್ನು ಅಭಿನಂದಿಸಲಾಯಿತು
ಹೊನ್ನಾಳಿ ತಾಲ್ಲೂಕು ಮುಕ್ತೇನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ನಾಗರಾಜ್ ಅವರನ್ನು ಅಭಿನಂದಿಸಲಾಯಿತು   

ಹೊನ್ನಾಳಿ: ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸವಿತಾ ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು.

ಕೆ.ಎಸ್. ಕಲ್ಲೇಶ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಸವಿತಾ ನಾಗರಾಜ್ ಹೊರತುಪಡಿಸಿ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನಿತಿನ್ ಎಸ್. ಜಾಧವ್ ಅವರು ಸವಿತಾ ನಾಗರಾಜ್ ಆಯ್ಕೆಯನ್ನು ಪ್ರಕಟಿಸಿದರು. 

ಗ್ರಾ.ಪಂ. ಉಪಾಧ್ಯಕ್ಷೆ ಶಾರದಮ್ಮ, ಕೆ.ಎಸ್. ಕಲ್ಲೇಶ್, ಕೆ.ಬಿ. ಮಹಾಂತೇಶ್, ಜಿ.ಎಚ್. ಹನುಮಂತಪ್ಪ, ಬಿ.ಟಿ. ಹನುಮಂತಪ್ಪ, ಜಿ.ಸಿ. ಪುಷ್ಪಾ, ಎಸ್. ಯಶೋಧಮ್ಮ, ಎ.ಕೆ. ಬಾಲಪ್ಪ, ಪಿಡಿಒ ಶಿವಕುಮಾರ್, ಹಾಗೂ ಪಂಚಾಯಿತಿ ಕಾರ್ಯದರ್ಶಿ, ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.