ADVERTISEMENT

ಮೈಲಾರಲಿಂಗೇಶ್ವರ ಜಾತ್ರೆಗೆ ತೆರೆ: ಜನಮನಸೂರೆಗೊಂಡ ‘ಕಾಲಶಸ್ತ್ರ ಪವಾಡ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 7:13 IST
Last Updated 2 ಮಾರ್ಚ್ 2024, 7:13 IST
ಮಲೇಬೆನ್ನೂರು ಸಮೀಪದ ದೇವರಬೆಳಕೆರೆ ಮೈಲಾರಲಿಂಗೇಶ್ವರ ರಥೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ‘ಕಾಲಶಸ್ತ್ರ ಪವಾಡ’ದ ಅಂಗವಾಗಿ ಬರಿಗೈಲಿ ಕಬ್ಬಿಣದ ಸರಪಳಿ ಎಳೆದು ತುಂಡು ಮಾಡುವ ರೋಚಕ ದೃಶ್ಯ
ಮಲೇಬೆನ್ನೂರು ಸಮೀಪದ ದೇವರಬೆಳಕೆರೆ ಮೈಲಾರಲಿಂಗೇಶ್ವರ ರಥೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ‘ಕಾಲಶಸ್ತ್ರ ಪವಾಡ’ದ ಅಂಗವಾಗಿ ಬರಿಗೈಲಿ ಕಬ್ಬಿಣದ ಸರಪಳಿ ಎಳೆದು ತುಂಡು ಮಾಡುವ ರೋಚಕ ದೃಶ್ಯ    

ಮಲೇಬೆನ್ನೂರು: ಸಮೀಪದ ದೇವರಬೆಳಕೆರೆ ಮೈಲಾರಲಿಂಗೇಶ್ವರ ರಥೋತ್ಸವದ ಪ್ರಯುಕ್ತ ಶುಕ್ರವಾರ ಪವಾಡದ ಕಟ್ಟೆಯಲ್ಲಿ ನಡೆದ ‘ಕಾಲಶಸ್ತ್ರ ಪವಾಡ’ ಜನಮನಸೂರೆಗೊಂಡವು.

‘ಏಳು ಕೋಟಿ, ಏಳು ಕೋಟಿ ... ಏಳು ಕೋಟಿಗೋ . . . ಚಾಂಗಮಲೋ’ ಎನ್ನುವ ಉದ್ಘೋಷದ ನಡುವೆ ಗೊರವಪ್ಪ ಕಂಬಕ್ಕೆ ಭದ್ರವಾಗಿ ಬಿಗಿಯಲಾಗಿದ್ದ ಕಬ್ಬಿಣದ ಸರಪಳಿಯನ್ನು ಬರಿಗೈಲಿ ಎಳೆದು ತುಂಡು ಮಾಡಿದರು.

ಸುತ್ತ ಜಮಾಯಿಸಿದ್ದ ಭಕ್ತರು ಡಮರುಗ ಬಾರಿಸಿ ಭಕ್ತಿ ಪ್ರದರ್ಶಿಸಿದರು. ಪವಾಡ ಮಾಡಿದ್ದ ವ್ಯಕ್ತಿ ಯಾವುದೇ ನೋವು ಆಗದ ರೀತಿ ಸಾಮಾನ್ಯನಂತೆ ನಡೆದು ಹೋಗಿದ್ದು ವಿಶೇಷ.

ADVERTISEMENT

ದೀವಟಿಗೆ, ಚಾಮರ, ಚಾವಟಿ ಸೇವೆ, ಬಾಯಿಗೆ ಬೀಗ ಬೀಗಹಾಕಿಕೊಂಡವರು ಹರಕೆ ಸಮರ್ಪಣೆ ಮಾಡಿದರು. ಕಡ್ಲೆಗೊಂದಿ, ಗುಳದಹಳ್ಳಿ ಹಾಗೂ ಹಳೆ ಊರಿನ ದುರ್ಗಾದೇವಿ ಹಾಗೂ ಬಸವೇಶ್ವರ ದೇವರ ಉತ್ಸವಮೂರ್ತಿ ಪಲ್ಲಕ್ಕಿಗಳು ಪಾಲ್ಗೊಂಡಿದ್ದವು.

ಓಕುಳಿ ಆಟದೊಂದಿಗೆ ಪ್ರಸಕ್ತ ಸಾಲಿನ ದೇವತಾ ಉತ್ಸವಕ್ಕೆ ತೆರೆ ಬಿದ್ದಿತು. ಮೈಲಾರ ಜಾತ್ರೆ ಮುಕ್ತಾಯವಾದ 3 ದಿನಗಳ ನಂತರ ಇಲ್ಲಿ ಜಾತ್ರೆ ನಡೆಯುವುದು ಪುರಾತನ ಕಾಲದಿಂದ ನಡೆದು ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಸುತ್ತಮುತ್ತಲ ಪ್ರದೇಶಗಳಿಂದ ಸಾವಿರಾರು ಜನರು ಪವಾಡ ವೀಕ್ಷಣೆಗೆ ಆಗಮಿಸಿದ್ದರು. ವಾಹನಗಳ ಭರಾಟೆ ಹೆಚ್ಚಾಗಿತ್ತು. ಪೊಲೀಸರು ಭದ್ರತೆ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.