ADVERTISEMENT

ನ್ಯಾಮತಿ: ಕೆಲ ಗ್ರಾಮಗಳಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 13:43 IST
Last Updated 16 ಮೇ 2024, 13:43 IST
ನ್ಯಾಮತಿ ತಾಲ್ಲೂಕು ಸವಳಂಗ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಯಲ್ಲಿ ಮಗುವನ್ನು ಮಳೆಯಿಂದ ರಕ್ಷಿಸಲು ಮುಂದಾದ ಮಹಿಳೆ
ನ್ಯಾಮತಿ ತಾಲ್ಲೂಕು ಸವಳಂಗ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಯಲ್ಲಿ ಮಗುವನ್ನು ಮಳೆಯಿಂದ ರಕ್ಷಿಸಲು ಮುಂದಾದ ಮಹಿಳೆ   

ನ್ಯಾಮತಿ: ಬಿಸಿಲಿನ ಝಳದಿಂದ ತತ್ತರಿಸಿದ ಜನತೆಗೆ ಬುಧವಾರ ರಾತ್ರಿ ಮತ್ತು ಗುರುವಾರ ಸಂಜೆ ಸುರಿದ ಮಳೆ ತಂಪು ವಾತಾವರಣ ಉಂಟು ಮಾಡಿ, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 

ಕೆರೆ, ಕಟ್ಟೆಗಳು ಬತ್ತಿ ಹೋಗಿದ್ದು, ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ತಗ್ಗಿ ರೈತರು ಆತಂಕ ಪಡುವಂತ ಸಂದರ್ಭದಲ್ಲಿ ಬಂದಿರುವ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಗುರುವಾರ ಸಂಜೆ ನ್ಯಾಮತಿ, ಸುರಹೊನ್ನೆ ಸೇರಿದಂತೆ ಗೋವಿನಕೋವಿ, ಚೀಲೂರು, ಸವಳಂಗ, ಜೀನಹಳ್ಳಿ, ಬೆಳಗುತ್ತಿ, ಯರಗನಾಳ್, ರಾಮೇಶ್ವರ, ಗುಡ್ಡೇಹಳ್ಳಿ, ಚಿನ್ನಿಕಟ್ಟೆ, ಕತ್ತಿಗೆ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ಸಾಧಾರಣ ಮಳೆ ಆಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ADVERTISEMENT
ನ್ಯಾಮತಿ ತಾಲ್ಲೂಕು ಸವಳಂಗ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಯಲ್ಲಿ ಛತ್ರಿ ಹಿಡಿದು ಸಾಗಿದ ಮಹಿಳೆ
ನ್ಯಾಮತಿಯಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದ ಸವಾರರು ರಸ್ತೆ ಬದಿ ಬೈಕ್ ನಿಲ್ಲಿಸಿ ಮಳೆಯಿಂದ ರಕ್ಷಣೆ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.