ಯರಗನಾಳ್ (ನ್ಯಾಮತಿ): ಎಲ್ಲ ಸಮುದಾಯದವರು ವಿಶ್ವಾಸ ಹಾಗೂ ಸಹಕಾರ ಮನೋಭಾವದಿಂದ ಇರುವ ಮೂಲಕ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲ್ಲೂಕಿನ ಯರಗನಾಳ್ ಗ್ರಾಮದಲ್ಲಿ ನಂದಿ ವಿಗ್ರಹ ಸ್ಥಾಪನೆಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಕೆಲ ದಿನಗಳಿಂದ ನಂದಿ ವಿಗ್ರಹ ಸ್ಥಾಪನೆಗೆ ಸಂಬಂಧಿಸಿದಂತೆ ಎರಡು ಸಮುದಾಯಗಳ ಮಧ್ಯೆ ಮನಸ್ತಾಪ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸಿರಿಗೆರೆ ಮಠಕ್ಕೆ ಅಕ್ಕಿ ಸಮರ್ಪಣೆ ಕುರಿತಂತೆ ಗ್ರಾಮದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ ಗ್ರಾಮದ ಎಲ್ಲ ಸಮುದಾಯದವರ ಸಭೆ ನಡೆಸಲಾಯಿತು. ನಂದಿ ವಿಗ್ರಹವನ್ನು ಎಲ್ಲರ ಅಭಿಪ್ರಾಯದಂತೆ ಈಗಿರುವ ಕಲ್ಯಾಣ ಮಂದಿರದ ಆವರಣದಲ್ಲಿ ಪ್ತತಿಷ್ಠಾಪನೆ ಮಾಡಲು ಗ್ರಾಮಸ್ಥರು ಒಪ್ಪಿಗೆ ನೀಡಿದರು. ಇದಕ್ಕಾಗಿ ಗ್ರಾಮಸ್ಥರನ್ನು ಅಭಿನಂದಿಸುವುದಾಗಿ ಶಾಸಕರು ಹೇಳಿದರು.
ಸೆಪ್ಟಂಬರ್ ಎರಡನೇ ವಾರದಲ್ಲಿ ಸಿರಿಗೆರೆ ಮಠಕ್ಕೆ ಅಕ್ಕಿ ಸಮರ್ಪಣೆ ಕಾರ್ಯಕ್ರಮ ನಡೆಯಲಿದ್ದು, ತಾಲ್ಲೂಕಿನ ಜನತೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಬಿ.ಗಂಗಪ್ಪ, ಸಾಧು ವೀರಶೈವ ಸಮುದಾಯದ ನ್ಯಾಮತಿ ತಾಲ್ಲೂಕು ಘಟಕ ಅಧ್ಯಕ್ಷ ಕೋಡಿಕೊಪ್ಪ ಶಿವಪ್ಪ, ಹೊನ್ನಾಳಿ ಘಟಕದ ಅಧ್ಯಕ್ಷ ಎಚ್.ಎ.ಗದ್ದಿಗೇಶ, ನ್ಯಾಮತಿ ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಜಿ. ವಿಶ್ವನಾಥ, ಗ್ರಾಮದ ಮುಖಂಡರಾದ ರುದ್ರೇಗೌಡ, ಶಾಂತವೀರಪ್ಪ, ಮಹಾದೇವಪ್ಪ ಮಾಸ್ಟರ್, ನಾಡಿಗೇರ ವಿರೂಪಾಕ್ಷಪ್ಪ, ಎ.ಕೆ. ರುದ್ರೇಶ, ಸುರೇಶ, ರಾಮೇಶ್ವರ ಚಂದ್ರೇಗೌಡ, ಕೆಂಚಿಕೊಪ್ಪ ಉಮಾಪತಿ, ಜೀನಹಳ್ಳಿ ನಾಗೇಂದ್ರಪ್ಪ, ಅರಬಗಟ್ಟೆ ರಮೇಶ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.