ADVERTISEMENT

ಮರಗಳ ಹನನ ಪ್ರಸ್ತಾವಕ್ಕೆ ವಿರೋಧ

ಬಟ್ಟೆಮಲ್ಲಪ್ಪ– ಯಡೇಹಳ್ಳಿ ಮಾರ್ಗದ ಹೆದ್ದಾರಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 4:40 IST
Last Updated 29 ಡಿಸೆಂಬರ್ 2022, 4:40 IST
ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ–ಯಡೇಹಳ್ಳಿ ಹಾಗೂ ಹೊಸನಗರ–ಜಯನಗರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ 665 ಮರಗಳ ಕಡಿತಲೆ ವಿರೋಧಿಸಿ ಪರಿಸರಾಸಕ್ತರು ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ–ಯಡೇಹಳ್ಳಿ ಹಾಗೂ ಹೊಸನಗರ–ಜಯನಗರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ 665 ಮರಗಳ ಕಡಿತಲೆ ವಿರೋಧಿಸಿ ಪರಿಸರಾಸಕ್ತರು ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.   

ಹೊಸನಗರ: ತಾಲ್ಲೂಕಿನ ಬಟ್ಟೆಮಲ್ಲಪ್ಪ–ಯಡೇಹಳ್ಳಿ ಹಾಗೂ ಹೊಸನಗರ–ಜಯನಗರ ನಡುವೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ 665 ಮರಗಳನ್ನು ಕಡಿಯುವ ಪ್ರಸ್ತಾವ ವಿರೋಧಿಸಿ ಪರಿಸರಾಸಕ್ತರು ಬುಧವಾರ ವಲಯ ಅರಣ್ಯಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕಡಿತಲೆ ಮಾಡಲು ಗುರುತು ಮಾಡಿರುವ ಮರಗಳು ಪಾರಂಪರಿಕ ಮರಗಳಾಗಿದ್ದು, ನೂರಾರು ವರ್ಷಗಳಿಂದ ಇವೆ. ಬೆಲೆಬಾಳುವ ಮರಗಳ ಹನನ ಮಾಡುವ ಕ್ರಮ ಸಾಧುವಲ್ಲ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಈ ಹೆದ್ದಾರಿ ಹಾದು ಹೊಗಲಿದ್ದು, ರಸ್ತೆಗಾಗಿ ಸೂಕ್ಷ್ಮ ಪ್ರದೇಶದ ವಾತಾವರಣವನ್ನು ಹಾಳು ಮಾಡಲಾಗುತ್ತಿದೆ. ಜಾಗತಿಕ ವಾತಾವರಣ ನಿಯಂತ್ರಿಸುವ ಮರಗಳ ಮಾರಣ ಹೋಮ ಮಾಡುವುದು ಖಂಡನೀಯ ಎಂದು ದೂರಿದರು.

ರಸ್ತೆ ಮಾರ್ಗದಲ್ಲಿ ಈಗ ಇರುವ ಜಾಗವನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ 665 ಮರಗಳ ಕಡಿಯುವ ಪ್ರಮೇಯವೇ ಬರುವುದಿಲ್ಲ. ಸಾಕಷ್ಟು ಮರಗಳನ್ನು ಉಳಿಸಿಕೊಳ್ಳಬಹುದು.ಮರಗಳನ್ನು ಉಳಿಸಿಕೊಳ್ಳುವಲ್ಲಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಪಶ್ಚಿಮ ಬಂಗಾಳದಲ್ಲಿರೈಲ್ವೆ ಮಾರ್ಗದ ವಿಸ್ತರಣೆಗಾಗಿಮರಗಳ ತೆರವು ಪ್ರಕರಣದಲ್ಲಿ ಸುಪ್ರಿಂಕೋರ್ಟ್ ತೀರ್ಪು ನೀಡಿದಂತೆ ಇಲ್ಲೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ADVERTISEMENT

ಚಲನಚಿತ್ರ ನಟ ಏಸುಪ್ರಕಾಶ್, ಬಿ.ಎಸ್. ಸುರೇಶ್, ಎಸ್. ರಾಧಕೃಷ್ಣ, ಸಾರ ದನುಷ್ ಕುಮಾರ್, ನಾರವಿ, ರಮೇಶ್ ನವಶಕ್ತಿ, ಕೆ.ಜಿ.ನಾಗೇಶ್, ಪ್ರಶಾಂತ್ ಕೆಇಬಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.