ಮಲೇಬೆನ್ನೂರು: ಪಟ್ಟಣದ ಮೂಲಕ ಶಿವಮೊಗ್ಗ ದಾವಣಗೆರೆಗೆ ಸಂಚರಿಸುವ ನಾನ್ ಸ್ಟಾಪ್ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆ ಮಾಡುವಂತೆ ಆಗ್ರಹಿಸಿ ದಲಿತ ಸಮುದಾಯದ ಮುಖಂಡ ನಾಗರಾಜ್ ಪಾಳೇಗಾರ್ ಸೋಮವಾರ ಬಸ್ ನಿಲ್ದಾಣದಲ್ಲಿ ಧರಣಿ ನಡೆಸಿದರು.
ಹರಿಹರ, ದಾವಣಗೆರೆಯಿಂದ ನಿತ್ಯ ನಾನ್ ಸ್ಟಾಪ್ ಕೆಎಸ್‌ಆರ್‌ಟಿಸಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿವಮೊಗ್ಗ ಸಂಚರಿಸುತ್ತಿವೆ.
ಎಲ್ಲ ಬಸ್‌ಗಳು ದಾವಣಗೆರೆಯಲ್ಲಿ ಮೂರ್ನಾಲ್ಕು ಕಡೆ, ಹರಿಹರದಲ್ಲಿ ಹೊನ್ನಾಳಿಯಲ್ಲಿ ಮೂರುಕಡೆ ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತವೆ. ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ಮಲೇಬೆನ್ನೂರು ಪಟ್ಟಣದ ಮೂಲಕ ಸಂಚರಿಸುವ ವೇಗಧೂತ ಬಸ್‌ಗಳು ನಿಲುಗಡೆ ಮಾಡುವುದಿಲ್ಲ. ಬಸ್ ಖಾಲಿ ಹೋದರೂ ನಿಲ್ಲಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳು, ನಾಗರಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೇಗದೂತ ಬಸ್ ಸಮಸ್ಯೆಯನ್ನು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಮಸ್ಯೆ ಪರಿಹರಿಸುವಂತೆ ಜನಪ್ರತಿನಿಧಿಗಳಿಗೂ ಕೋರಲಾಗಿದೆ ಆದರೆ ಪರಿಹಾರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.