ADVERTISEMENT

ಬಸವಾಪಟ್ಟಣ | ಮಳೆ ಕೊರತೆ: ಚಿಗುರೊಡೆಯದ ಮೆಕ್ಕೆಜೋಳ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 14:32 IST
Last Updated 5 ಜುಲೈ 2024, 14:32 IST
ಬಸವಾಪಟ್ಟಣ ಹೋಬಳಿಯಲ್ಲಿ ಚಿಗುರೊಡೆದಿರುವ ಹತ್ತಿ ಗಿಡಗಳ ನಡುವೆ ರೈತರು ಎಡೆಕುಂಟೆ ಹೊಡೆಯುತ್ತಿರುವುದು
ಬಸವಾಪಟ್ಟಣ ಹೋಬಳಿಯಲ್ಲಿ ಚಿಗುರೊಡೆದಿರುವ ಹತ್ತಿ ಗಿಡಗಳ ನಡುವೆ ರೈತರು ಎಡೆಕುಂಟೆ ಹೊಡೆಯುತ್ತಿರುವುದು    

ಬಸವಾಪಟ್ಟಣ: ಇಲ್ಲಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿರುವ 300 ಎಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಬಹುಪಾಲು ಮುಗಿದಿದ್ದರೂ ಹೊಲಗಳಲ್ಲಿ ಸಸಿಗಳು ಚಿಗುರೊಡೆದಿಲ್ಲ.

ಮಳೆ ಕೊರತೆ ನಡುವೆಯೇ ರೈತರು ಹತ್ತಿ ಬೀಜ ಬಿತ್ತಿದ್ದರು. ಮೊಳಕೆಯೊಡೆದು ಹೊರಬಂದ ಸಸಿಗಳಿಗೆ ಈಗ ಎಡೆಕುಂಟೆ ಹೊಡೆಯುತ್ತಿದ್ದಾರೆ.

ಎಲ್ಲಾ ಕಡೆ ಸಾಕಷ್ಟು ಮಳೆ ಆಗುತ್ತಿದೆ. ಆದರೆ, ಈ ಭಾಗದಲ್ಲಿ ಮಳೆ ಕಡಿಮೆಯಾಗಿದೆ ಎಂದು ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಬಿ.ಎಲ್.ಅವಿನಾಶ್‌ ತಿಳಿಸಿದ್ದಾರೆ. 

ADVERTISEMENT

‘ಈ ವರ್ಷವೂ ಮಳೆ ಸಾಕಷ್ಟು ಬೀಳುತ್ತಿಲ್ಲ. ಮುಂದೆ ಪುನರ್ವಸು, ಪುಷ್ಯ ಮಳೆಗಳು ಬರಬಹುದು ಎಂಬ ನಂಬಿಕೆಯಿಟ್ಟು ಬಿತ್ತನೆ ಮಾಡಿದ್ದೇವೆ. ಮಳೆ ಕೈಕೊಟ್ಟರ ಮೆಕ್ಕೆಜೋಳ ಬೀಜ ಬಿತ್ತಿದ್ದು ವಿಫಲವಾಗುತ್ತದೆ’ ಎಂದು ಗುಡ್ಡದ ಕೊಮಾರನಹಳ್ಳಿ ವೀರೇಶನಾಯ್ಕ, ನಿಲೋಗಲ್ ರಂಗಪ್ಪ ಹಾಗೂ ಶೃಂಗಾರಬಾಗ್ ತಾಂಡಾದ ಶೇಖರನಾಯ್ಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.