ಹರಿಹರ: ಸೋಮವಾರ ರಾತ್ರಿ ಮುಂಗಾರು ಪೂರ್ವ ಹದ ಮಳೆಯಾಗಿದ್ದು, ತಾಲ್ಲೂಕಿನ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ತಡರಾತ್ರಿ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಪೈಕಿ ಇದು ಹದ ಮಳೆ ಎನಿಸಿದೆ.
ನದಿ, ಕೆರೆ, ಹಳ್ಳ, ಕೊಳ್ಳ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಇಲ್ಲದಂತಾಗಿ ಬಸವಳಿದಿದ್ದ ರೈತರು ಹಾಗೂ ಜನ ಸಾಮಾನ್ಯರಿಗೆ ಈ ಮಳೆ ಆಶಾಭಾವನೆ ಮೂಡಿಸಿದೆ.
ಮಳೆ ಪ್ರಮಾಣ: ಹರಿಹರದಲ್ಲಿ 3 ಸೆಂ.ಮೀ ಕೊಂಡಜ್ಜಿಯಲ್ಲಿ 2, ಹೊಳೆಸಿರಿಗೆರೆಯಲ್ಲಿ 3.3, ಮಲೆಬೆನ್ನೂರು 1.7, ಸೆಂ.ಮೀ ಸೇರಿ 10 ಸೆಂ.ಮೀ ಮಳೆ ದಾಖಲಾಗಿದೆ.
ಈ ಮಳೆಯಿಂದಾಗಿ ಮಳೆಯಾಶ್ರಿತ ಬೆಳೆ ಬೆಳೆಯುವ ರೈತರು ಜಮೀನು ಹದ ಮಾಡಿಕೊಳ್ಳಲು ಅನುವು ಮಾಡಿದೆ. ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದ ತೋಟಗಾರಿಕೆ ಬೆಳೆಗಳಿಗೆ ಆಪತ್ಬಾಂಧವವಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.