ADVERTISEMENT

ಸಂತೇಬೆನ್ನೂರು | ಎಡಬಿಡದ ಮಳೆ: ಮೆಕ್ಕಜೋಳದ ಹೊಲದಲ್ಲಿ ನೀರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 14:41 IST
Last Updated 20 ಜುಲೈ 2024, 14:41 IST
ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆಯ ಮೆಕ್ಕೆಜೋಳದ ಜಮೀನಿನಲ್ಲಿ ಮಳೆ ನೀರು ನಿಂತಿರುವುದು
ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆಯ ಮೆಕ್ಕೆಜೋಳದ ಜಮೀನಿನಲ್ಲಿ ಮಳೆ ನೀರು ನಿಂತಿರುವುದು   

ಸಂತೇಬೆನ್ನೂರು: ಹೋಬಳಿಯಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮೆಕ್ಕಜೋಳದ ಹೊಲಗಳಲ್ಲಿ ನೀರು ನಿಂತಿದ್ದು, ರೈತರ ಆತಂಕ ಹೆಚ್ಚಿಸಿದೆ. ಒಂದೂವರೆ ತಿಂಗಳ ಹಿಂದೆ ಬಿತ್ತಿದ ಮೆಕ್ಕೆಜೋಳ ಸೂಲಂಗಿ ಹಂತ ತಲುಪಿದೆ.

ಬಿಸಿಲು ಬೀಳದೆ ನಿರಂತರ ಮಳೆಯಾದರೆ ಬೆಳೆ ಹಳದಿ ಬಣ್ಣಕ್ಕೆ ತಿರುಗಲಿದೆ. ಕಪ್ಪು ಭೂಮಿಯಲ್ಲಿ ನೀರು ನಿಂತರೆ ತೇವಾಂಶ ಒಣಗಲು ದೀರ್ಘ ಕಾಲ ಬೇಕು ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಭೀಮನೆರೆ, ದೊಡ್ಡಬ್ಬಿಗೆರೆ ಭಾಗದ ನೂರಾರು ಹೆಕ್ಟೇರ್ ಜಮೀನಿನಲ್ಲಿ ಅತಿವೃಷ್ಟಿಯಿಂದ ಹೊಲಗಳಲ್ಲಿ ನೀರು ನಿಂತಿದೆ. ಆರಂಭದಲ್ಲಿ ಮಳೆ ಇಲ್ಲದೇ ನಲುಗಿದ ಬೆಳೆ ನಂತರ ಚೇತರಿಸಿಕೊಂಡಿದ್ದು, ಅಧಿಕ ಮಳೆಯಿಂದ ಸಂಕಷ್ಟ ಎದುರಾಗಬಹುದು ಎಂಬುದು ರೈತರ ಆತಂಕ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.