ADVERTISEMENT

ಸೆ. 24ರಿಂದ ಮ್ಯಾನುಯಲ್ ಸ್ಕಾವೆಂಜರ್‌ಗಳ ಮರು ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 13:35 IST
Last Updated 22 ಸೆಪ್ಟೆಂಬರ್ 2019, 13:35 IST

ದಾವಣಗೆರೆ: ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಹಣಕಾಸು ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಮ್ಯಾನುಯಲ್ ಸ್ಕಾವೆಂಜರ್‌ಗಳ ವಿಶೇಷ ಮರು ಸಮೀಕ್ಷೆ ಕಾರ್ಯ ಸೆ. 24ರಿಂದ ನಡೆಯಲಿದೆ.

ಖುದ್ದು ಸಮೀಕ್ಷೆ ಮಾಡುವ ಉದ್ದೇಶದಿಂದ 7 ದಿವಸ ಮರು ಸಮೀಕ್ಷೆ ನಡೆಯಲಿದೆ. ಸೆ. 24 ಹಾಗೂ 25ರಂದು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿನ ರಂಗಮಂದಿರದಲ್ಲಿ 26ರಂದು ಹರಿಹರ ನಗರಸಭೆ ಕಚೇರಿ, 27ರಂದು ಚನ್ನಗಿರಿ ಹಾಗೂ 30ರಂದು ಮಲೇಬೆನ್ನೂರು ಪುರಸಭೆ ಕಚೇರಿಗಳಲ್ಲಿ ಸಮೀಕ್ಷೆ ನಡೆಸಲಾಗುವುದು.

ಅಕ್ಟೋಬರ್ 1ರಂದು ಹೊನ್ನಾಳಿ ಹಾಗೂ 3ರಂದು ಜಗಳೂರು ಪಟ್ಟಣ ಪಂಚಾಯಿತಿ ಕಚೇರಿಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ಸಮೀಕ್ಷೆ ನಡೆಯಲಿದ್ದು, ಸ್ಕಾವೆಂಜರ್‌ಗಳು ಹಾಜರಾಗಿ ನಿಗದಿತ ನಮೂನೆ ಫಾರಂಗಳಲ್ಲಿ ಸಂಬಂಧಪಟ್ಟ ಅವಲಂಬಿತ ಎಲ್ಲಾ ಸದಸ್ಯರ ವಿವರಗಳನ್ನು ದಾಖಲಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು.

ADVERTISEMENT

ಸಮೀಕ್ಷೆಗೆ ಮೂರು ಪಾಸ್‌ ಪೋರ್ಟ್ ಸೈಜಿನ ಭಾವಚಿತ್ರಗಳು, ಆಧಾರ್‌ ಕಾರ್ಡ್‌, ಬ್ಯಾಂಕ್ ಪಾಸ್ ಪುಸ್ತಕ, ಗುರುತಿನ ಚೀಟಿ, ಪಡಿತರ ಚೀಟಿಗಳ ಮೂಲ ಹಾಗೂ ನಕಲು ಪ್ರತಿಗಳು, ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯ ಯಾವುದಾದರೂ ದಾಖಲೆಯನ್ನು ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಡಾ.ಬಿ.ಆರ್‌. ಅಂಬೇಡ್ಕರ್ ಸಫಾಯಿ ಕರ್ಮಚಾರಿ ಮ್ಯಾನುಯಲ್ ಸ್ಕಾವೆಂಜರ್‌ ಕ್ಷೇಮಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಎಸ್. ಶಂಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.