ADVERTISEMENT

ಎಂಬಿಎ ಪರೀಕ್ಷೆ ಮುಗಿದ ಮೂರೂವರೆ ಗಂಟೆಯಲ್ಲೇ ಫಲಿತಾಂಶ! ದಾವಣಗೆರೆ ವಿವಿ ಸಾಧನೆ

ದಾವಣಗೆರೆ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಸಾಧನೆ

ವಿನಾಯಕ ಭಟ್ಟ‌
Published 24 ಡಿಸೆಂಬರ್ 2022, 6:15 IST
Last Updated 24 ಡಿಸೆಂಬರ್ 2022, 6:15 IST
   

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯವು ಎಂಬಿಎ ದ್ವಿತೀಯ ಸೆಮಿಸ್ಟರ್‌ನ ಕೊನೆಯ ಪರೀಕ್ಷೆ ಮುಗಿದ ಮೂರೂವರೆ ಗಂಟೆಗಳಲ್ಲೇ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡುವ ಮೂಲಕ ಗಮನ ಸೆಳೆದಿದೆ.

ಡಿಸೆಂಬರ್‌ 9ರಂದು ಎಂಬಿಎ ದ್ವಿತೀಯ ಸೆಮಿಸ್ಟರ್‌ ಪರೀಕ್ಷೆ ಆರಂಭಗೊಂಡಿತ್ತು. ಕೊನೆಯ ಪರೀಕ್ಷೆಯುಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮುಗಿದ ತಕ್ಷಣವೇ ಮೌಲ್ಯಮಾಪನ ಕಾರ್ಯವನ್ನು ಎರಡು ಗಂಟೆಗಳಲ್ಲೇ ಪೂರ್ಣಗೊಳಿಸಿದ ವಿಶ್ವವಿದ್ಯಾಲಯವು, ಸಂಜೆ 4.30ರ ವೇಳೆಗೆ ಫಲಿತಾಂಶವನ್ನು ಪ್ರಕಟಿಸಿದೆ. ಪರೀಕ್ಷೆ ಬರೆದಒಟ್ಟು 233 ವಿದ್ಯಾರ್ಥಿಗಳ ಪೈಕಿ 223 (ಶೇ 95.71) ವಿದ್ಯಾರ್ಥಿಗಳುಉತ್ತೀರ್ಣರಾಗಿದ್ದಾರೆ.

‘ಡಿಸೆಂಬರ್‌ 9, 12 ಹಾಗೂ 14ರಂದು ಪರೀಕ್ಷೆ ಮುಗಿದ ಬಳಿಕ ಮೌಲ್ಯಮಾಪಕರನ್ನು ಕರೆಸಿ ಮೂರೂ ವಿಷಯಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಮಾಡಿಸಿ ಅಂಕಗಳನ್ನು ನಮೂದಿಸಿಕೊಂಡಿದ್ದೆವು. ನಂತರದ ಮೂರು ವಿಷಯಗಳ ಪರೀಕ್ಷೆ ಮುಗಿದ ಬಳಿಕ ಗುರುವಾರ ಅವುಗಳನ್ನೂ ಮೌಲ್ಯಮಾಪನ ಮಾಡಿಸಿದ್ದೆವು. ಶುಕ್ರವಾರ ಕೊನೆಯ ಪರೀಕ್ಷೆ ಮುಗಿಯುತ್ತಿದ್ದಂತೆ ಕೋಡಿಂಗ್‌ಮಾಡಿ, ಎಂಟು ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಿ ಅಂಕಗಳನ್ನು ಕ್ರೋಢೀಕರಿಸಿ ತ್ವರಿತವಾಗಿ ಫಲಿತಾಂಶವನ್ನು ಪ್ರಕಟಿಸಿದ್ದೇವೆ’ಎಂದು ವಿಶ್ವವಿದ್ಯಾಲಯದಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಕೆ. ರಾಜು ವಿವರಿಸಿದರು.

ADVERTISEMENT

‘ಸಾಂಪ್ರದಾಯಿಕವಾಗಿ ಕಾರ್ಯನಿರ್ವಹಿಸಿದರೆ ಫಲಿತಾಂಶ ಪ್ರಕಟಿಸಲು 10–12 ದಿನಗಳಾಗುತ್ತಿತ್ತು. ಸೆಪ್ಟೆಂಬರ್‌ನಲ್ಲಿ ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆ ನಡೆದಾಗಲೂ ಕೊನೆಯ ಪರೀಕ್ಷೆ ಮುಗಿದ 48 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಲಾಗಿತ್ತು.ಬದ್ಧತೆ ಇದ್ದರೆ ಮೂರ್ನಾಲ್ಕು ಗಂಟೆಗಳಲ್ಲೇ ಫಲಿತಾಂಶ ನೀಡಲು ಸಾಧ್ಯ ಎಂಬುದನ್ನುತೋರಿಸಿಕೊಟ್ಟಿದ್ದೇವೆ’ ಎಂದುಹೇಳಿದರು.

‘ಪರೀಕ್ಷೆ ಮುಗಿದ ಬಳಿಕ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ತುಂಬಾ ದಿನಗಳ ಕಾಲ ಕಾಯುವಂತಾಗಬಾರದು. ನಾವು
ಫಲಿತಾಂಶ ಕೊಡುವುದು ವಿಳಂಬವಾದರೆ ಈಗಾಗಲೇ ಉದ್ಯೋಗ ಸಿಕ್ಕಿರುವ, ಪಿಎಚ್‌.ಡಿ ಮಾಡಬೇಕು ಎಂದುಕೊಂಡಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.ನಾವು ಫಲಿತಾಂಶವನ್ನು ಎಷ್ಟು ಬೇಗನೆ ಕೊಡುತ್ತೇವೋ ವಿದ್ಯಾರ್ಥಿಗಳಜೀವನಕ್ಕೆ ಅಷ್ಟು ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ ತ್ವರಿತವಾಗಿಮೌಲ್ಯಮಾಪನ ಮಾಡಿಸಿ ಫಲಿತಾಂಶ ಪ್ರಕಟಿಸಿದ್ದೇವೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ)ಡಾ. ಶಿವಶಂಕರ್‌ ಕೆ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ವಿದ್ಯಾರ್ಥಿಗಳು ಪರೀಕ್ಷೆ ಬರೆದು ಮನೆಗೆ ತಲುಪುವ ಹೊತ್ತಿಗೆ ಅವರ ಮೊಬೈಲ್‌ಗೆ ಫಲಿತಾಂಶ ತಲುಪಿಸಬೇಕು ಎಂಬ ಗುರಿಯೊಂದಿಗೆ ಕೆಲಸ ಮಾಡಿದ್ದೆವು. ಪರೀಕ್ಷೆ ಮುಗಿದ ಮೂರೂವರೆ ಗಂಟೆಗಳಲ್ಲೇ ಫಲಿತಾಂಶ ಕೊಡಲು ಸಾಧ್ಯವಾಗಿದೆ.

–ಡಾ. ಶಿವಶಂಕರ್‌ ಕೆ., ಕುಲಸಚಿವ (ಮೌಲ್ಯಮಾಪನ), ದಾ.ವಿ.ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.