ಸಂತೇಬೆನ್ನೂರು: ಇಲ್ಲಿನ ಗ್ರಾಮೀಣ ಕೂಟ ಸಂಸ್ಥೆ ವತಿಯಿಂದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ₹2.25 ಲಕ್ಷದ ಮೌಲ್ಯದ ಪರಿಕರಗಳನ್ನು ಗುರುವಾರ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧಿಕಾರಿ ಶ್ರೀವತ್ಸ ಮಾತನಾಡಿ, ಸಾಮಾಜಿಕ ಕಾಳಜಿಯಿಂದ ಶಾಲೆ, ಆರೋಗ್ಯ ಕೇಂದ್ರ, ಯುವಕರಿಗೆ ತರಬೇತಿ ಹಾಗೂ ಗ್ರಾಮೀಣಾಭಿವೃದ್ಧಿ ಸೇವೆ ಮಾಡುತ್ತಾ ಬಂದಿದೆ. ಸಮುದಾಯ ಆರೋಗ್ಯಕ್ಕೆ ಮಂಚ, ಬೆಡ್, ಹೊದಿಕೆ, ಟೇಬಲ್ ಹಾಗೂ ಬೀರುಗಳನ್ನು ಕೊಡಲಾಗಿದೆ. ಸಂಸ್ಥೆಯ ಲಾಭಾಂಶದಲ್ಲಿ ಒಂದಿಷ್ಟ ಹಣವನ್ನು ಸಾಮಾಜಿಕ ಸೇವೆಗೆ ಮೀಸಲಾಡಲಾಗಿದೆ ಎಂದರು.
ಸಮುದಾಯದ ಸಹಭಾಗಿತ್ವದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ನೀಡಲು ಸಾಧ್ಯ. ಗ್ರಾಮೀಣ ಕೂಟದ ಕೊಡುಗೆ ಅನುಕರಣೀಯ. ವೈದ್ಯರು ಹಾಗೂ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಹೇಳಿದರು.
ಉಪ ತಹಶೀಲ್ದಾರ್ ಮಂಜುನಾಥ್, ನಬಾರ್ಡ್ ಅಧಿಕಾರಿ ರೇಖಾ, ಸಿಪಿಐ ನಿಂಗನಗೌಡ ನೆಗಳೂರು, ಪಿಎಸ್ಐ ಚನ್ನವೀರಪ್ಪ, ನಿವೃತ್ತ ಡಿವೈಎಸ್‌ಪಿ ಪ್ರಹ್ಲಾದ್, ಎಂ.ಎನ್.ರುದ್ರಪ್ಪ, ಡಾ.ದೇವರಾಜ್, ರವಿಕುಮಾರ್, ಸಚ್ಚಿನ್, ಸೂರ್ಯ ನಾರಾಯಣ, ಶಶಿಕುಮಾರ್, ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.