ADVERTISEMENT

ಸ್ಥಳೀಯ ಸಹಕಾರದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:28 IST
Last Updated 9 ಆಗಸ್ಟ್ 2024, 16:28 IST
ಸಂತೇಬೆನ್ನೂರಿನ ಎಸ್‌ಎಸ್‌ಜೆವಿಪಿ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಟಿ-ಶರ್ಟ್ ನೀಡಿದ ದಶರಥ ಅವರನ್ನು ಶಾಲಾ ಸಿಬ್ಬಂದಿ ಸನ್ಮಾನಿಸಿದರು
ಸಂತೇಬೆನ್ನೂರಿನ ಎಸ್‌ಎಸ್‌ಜೆವಿಪಿ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಟಿ-ಶರ್ಟ್ ನೀಡಿದ ದಶರಥ ಅವರನ್ನು ಶಾಲಾ ಸಿಬ್ಬಂದಿ ಸನ್ಮಾನಿಸಿದರು   

ಸಂತೇಬೆನ್ನೂರು: ಸರ್ಕಾರಿ ಶಾಲೆಗಳಿಗೆ ಸ್ಥಳೀಯ ಸಮುದಾಯ ಪರಿಪೂರ್ಣ ಸಹಕಾರ ನೀಡಿದರೆ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ದಶರಥ ಹೇಳಿದರು.

ಇಲ್ಲಿನ ಎಸ್‌ಎಸ್‌ಜೆವಿಪಿ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ 50 ಕ್ರೀಡಾ ಟಿ-ಶರ್ಟ್‌ಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

ದುಡಿಮೆಯ ಅಲ್ಪಭಾಗವನ್ನು ಸಾಮಾಜಿಕ ಸೇವೆಗೆ ಮೀಸಲಿಟ್ಟರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡಿದರೆ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಹೆಚ್ಚು ಸಾಧನೆ ಮಾಡಬಲ್ಲರು. ಮೂಲ ಶಿಕ್ಷಣದ ಅಡಿಪಾಯ ಪರಿಪೂರ್ಣವಾಗಿದ್ದರೆ ಉನ್ನತ ಶಿಕ್ಷಣ ಕಲಿಕೆ ಸರಳವಾಗಲಿದೆ. ಮಕ್ಕಳಲ್ಲಿ ಆಸಕ್ತಿ ಕೆರಳಿಸಿದರೆ ಸ್ವ-ಪ್ರಯತ್ನದಿಂದ ಕಲಿಯುವರು ಎಂದರು.

ADVERTISEMENT

ಮುಖ್ಯ ಶಿಕ್ಷಕ ಎಚ್.ಎನ್.ರವಿ, ಶಿಕ್ಷಕರಾದ ಮಂಜುನಾಥ್, ಉಜ್ಜನಿನಪ್ಪ, ಎಂ.ಬಿ.ನಾಗರಾಜ್, ವೀರಭದ್ರಪ್ಪ, ಮಂಜುನಾಥ್, ಅಂಜಲಿದೇವಿ, ಯಾಸ್ಮೀನ್, ಸುಧಾರಾಣಿ, ಗ್ರಾಮದ ಯುವಕರಾದ ರಂಗಸ್ವಾಮಿ, ವಿನಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.