ADVERTISEMENT

ಸಂತೇಬೆನ್ನೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 52 ವರ್ಷದ ಸಿದ್ದಲಿಂಗಪ್ಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 7:34 IST
Last Updated 27 ಮಾರ್ಚ್ 2024, 7:34 IST
ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸೋಮವಾರ ಅರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 52 ವರ್ಷದ ವಿಕಲ ಚೇತನ ಸಿದ್ದಲಿಂಗಪ್ಪ ಪರೀಕ್ಷೆ ಬರೆದರು.
ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸೋಮವಾರ ಅರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 52 ವರ್ಷದ ವಿಕಲ ಚೇತನ ಸಿದ್ದಲಿಂಗಪ್ಪ ಪರೀಕ್ಷೆ ಬರೆದರು.   

ಸಂತೇಬೆನ್ನೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಸೋಮವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 52 ವರ್ಷದ ಅಂಗವಿಕಲ ಸಿದ್ಧಲಿಂಗಪ್ಪ ಪರೀಕ್ಷೆ ಬರೆದರು.

‘ವಿಶೇಷ ಮೀಸಲಾತಿಯಲ್ಲಿ ಪಡಿತರ ವಿತರಣಾ ಕೇಂದ್ರ ತೆರೆಯಲು ಎಸ್ಸೆಸ್ಸೆಲ್ಸಿ ತೇರ್ಗಡೆ ಕಡ್ಡಾಯ. ಹಾಗಾಗಿ 35 ವರ್ಷಗಳ ನಂತರ ಪುನಃ ಪರೀಕ್ಷೆಗೆ ಕುಳಿತಿದ್ದೇನೆ. ಕನ್ನಡ ವಿಷಯವನ್ನು ಉತ್ತಮವಾಗಿ ಬರೆದಿದ್ದೇನೆ. ಕೆಲವು ಶಿಕ್ಷಕರಿಂದ ಮಾರ್ಗದರ್ಶನ ಪಡೆದಿದ್ದೇನೆ. ವಿದ್ಯಾರ್ಥಿಗಳಿಂದ ನೋಟ್ಸ್ ಸಂಗ್ರಹಿಸಿ ಓದಿದ್ದೇನೆ. ಉದ್ಯೋಗ ಭರವಸೆಗೆ ಎಸ್ಸೆಸ್ಸೆಲ್ಸಿ ಕಡ್ಡಾಯ. ಹಾಗಾಗಿ ಇಂದಿನ ಮಕ್ಕಳು ಓದನ್ನು ನಿರ್ಲಕ್ಷಿಸಬಾರದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT