ADVERTISEMENT

ಜಗಳೂರು: ಸರ್ವರ್ ಸಮಸ್ಯೆ; ಬಿತ್ತನೆ ಬೀಜ ವಿಳಂಬಕ್ಕೆ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2023, 14:36 IST
Last Updated 12 ಜೂನ್ 2023, 14:36 IST
ಜಗಳೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಸರ್ವರ್ ಸಮಸ್ಯೆಯಿಂದ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬವಾಗಿದ್ದರಿಂದ ರೈತರು ತಾಸುಗಟ್ಟಲೆ ಕಾದಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದರು.
ಜಗಳೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಸರ್ವರ್ ಸಮಸ್ಯೆಯಿಂದ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬವಾಗಿದ್ದರಿಂದ ರೈತರು ತಾಸುಗಟ್ಟಲೆ ಕಾದಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದರು.   

ಜಗಳೂರು: ಇಲ್ಲಿನ ಎಪಿಎಂಸಿಯಲ್ಲಿರುವ ಕೃಷಿ ಇಲಾಖೆಯ ಬಿತ್ತನೆ ಬೀಜ ವಿತರಣಾ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದ ಬೀಜ ವಿತರಣೆಯಲ್ಲಿ ವಿಳಂಬವಾಗುತ್ತಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್ ನೋಂದಣಿ ವಿಳಂಬವಾಗುತ್ತಿದ್ದು, ತ್ವರಿತವಾಗಿ ಬೀಜ ವಿತರಣೆ ಸಾಧ್ಯವಾಗದೆ ಮಾರಾಟ ಕೇಂದ್ರದಲ್ಲಿ ರೈತರು ತಾಸುಗಟ್ಟಲೆ ಉದ್ದದ ಸಾಲಿನಲ್ಲಿ ಕಾಯಬೇಕಾದ ಸ್ಥಿತಿ ಇದೆ.

ಬಿತ್ತನೆ ಬೀಜ ಖರೀದಿಸಲು ಆನ್‌ಲೈನ್ ನೋಂದಣಿ ಹಾಗೂ ಬಾರ್ ಕೋಡಿಂಗ್ ಸ್ಕ್ಯಾನ್ ಪ್ರಕ್ರಿಯೆ ಕಡ್ಡಾಯವಾಗಿದೆ. ಆದರೆ, ಮೂರು ದಿನಗಳಿಂದ ಸರ್ವರ್ ಸಮಸ್ಯೆಯಿಂದ ನಿಗದಿತ ಸಮಯದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸುವಲ್ಲಿ ತೀವ್ರ ಸಮಸ್ಯೆ ಎದುರಾಗಿದೆ. 

ADVERTISEMENT

‘ಸಿಬ್ಬಂದಿ ಕೊರತೆ ಮಧ್ಯೆಯೂ ಎರಡು ಕಂಪ್ಯೂಟರ್‌ಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಲಾಗುತ್ತಿದೆ. ಬಾರ್‌ಕೋಡ್ ಸ್ಕ್ಯಾನಿಂಗ್‌ನೊಂದಿಗೆ ಪಾರದರ್ಶಕವಾಗಿ ರೈತರಿಗೆ ಬೀಜ ವಿತರಣೆ ಮಾಡಲಾಗುತ್ತಿದೆ. ದಾಸ್ತಾನು ಪೂರೈಕೆಗೆ ಕೊರತೆ ಇಲ್ಲ. ಮೆಕ್ಕೆಜೋಳ, ತೊಗರಿ, ಸೋಯಾಬಿನ್, ಸೂರ್ಯಕಾಂತಿ ಇತರ ಬೀಜದ ಸಂಗ್ರಹವಿದೆ. ರೈತರು ಅವಸರ ಪಡದೆ ಸಹಕರಿಸಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ತಿಳಿಸಿದ್ದಾರೆ.

ಒಂದು ಪಾಕೆಟ್ ಬಿತ್ತನೆ ಬೀಜಕ್ಕೆ ಸಾಮಾನ್ಯ ವರ್ಗದವರಿಗೆ ₹ 80 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ₹ 120 ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಆಧಾರ ಕಾರ್ಡ್, ಜಾತಿ ಪ್ರಮಾಣ ಪತ್ರ, ದಾಖಲೆ ಸಲ್ಲಿಸಬೇಕು ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.