ದಾವಣಗೆರೆ: ಶಂಕರಾಚಾರ್ಯರ ಜಯಂತಿ ಅಂಗವಾಗಿ ಶ್ರೀ ಶಂಕರ ಸೇವಾ ಸಂಘದ ವತಿಯಿಂದ ಶಂಕರಾಚಾರ್ಯರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ದಾವಣಗೆರೆಯ ರಾಜಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಲಾಯಿತು.
ನೂರಾರು ಜನರು ಸೇರಿದ್ದ ಈ ಉತ್ಸವದಲ್ಲಿ ಮಹಿಳೆಯರಿಂದ ಭಜನೆ, ಪುರುಷರಿಂದ ನೃತ್ಯ ಭಜನೆ ಹಾಗೂ ವಿಶೇಷವಾಗಿ ಮಧು ಅಣ್ಣ ಮತ್ತು ತಂಡದವರಿಂದ ಚಂಡೆ ವಾದ್ಯ ಈ ಉತ್ಸವಕ್ಕೆ ಮೆರಗು ತಂದಿತು.
ಪಲ್ಲಕ್ಕಿ ಉತ್ಸವದ ನೇತೃತ್ವವನ್ನು ಸಂಘದ ಉಪಾಧ್ಯಕ್ಷ ಮೋತಿ ಸುಬ್ರಹ್ಮಣ್ಯ, ಕಾರ್ಯದರ್ಶಿ ಶ್ರೀನಿವಾಸ್ ಜೋಶಿ, ಮಾಜಿ ಅಧ್ಯಕ್ಷ ಡಾ. ಎಸ್.ಆರ್. ಹೆಗಡೆ, ಪುರೋಹಿತರಾದ ಪುಟ್ಟಸ್ವಾಮಿ, ಸಂಘದ ಸದಸ್ಯರಾದ ವಿನಾಯಕ ಜೋಶಿ, ಸುಬ್ಬಣ್ಣ (ಮಂಡಕ್ಕಿ) ಅನಿಲ್ ಬಾರಂಗಳ್, ಬಾಲಕೃಷ್ಣ ವೈದ್ಯ, ಚೈತನ್ಯ ನಾರಾಯಣಸ್ವಾಮಿ, ರಾಘವೇಂದ್ರ, ಶ್ರೀಕಾಂತ್ ಜೋಶಿ, ರಮೇಶ್ ಪಾಟೀಲ್, ಶ್ರೀಕಾಂತ್ ಕೆ ಎಂ., ಡಾ. ಎಂ.ಸಿ. ಶಶಿಕಾಂತ್ ಹಾಗೂ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.