ADVERTISEMENT

ಸಿದ್ದರಾಮಯ್ಯ ಯಾರಿಗೂ ಮೋಸ ಮಾಡಿಲ್ಲ: ಎಚ್‌.ಎಂ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 4:08 IST
Last Updated 10 ಡಿಸೆಂಬರ್ 2021, 4:08 IST
ಹೆಲಿಕಾಫ್ಟರ್‌ ಪತನವಾಗಿ ಮೃತಪಟ್ಟಿರುವ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 13 ಮಂದಿಗೆ ದಾವಣಗೆರೆ ಕುರುಬರ ಯುವ ಘಟಕವು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು
ಹೆಲಿಕಾಫ್ಟರ್‌ ಪತನವಾಗಿ ಮೃತಪಟ್ಟಿರುವ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 13 ಮಂದಿಗೆ ದಾವಣಗೆರೆ ಕುರುಬರ ಯುವ ಘಟಕವು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು   

ದಾವಣಗೆರೆ: ಸಿದ್ದರಾಮಯ್ಯ ಯಾರಿಗೂ ಮೋಸ ಮಾಡಿ ಬಂದಿಲ್ಲ. ಅವರು ಮುಖ್ಯಮಂತ್ರಿಯಾಗಿ ಅತ್ಯತ್ತಮ ಆಡಳಿತ ನೀಡಿ, ಜನಮನ್ನಣೆ ಪಡೆದ ನಾಯಕ. ಸಿದ್ದರಾಮಯ್ಯ ಅವರಿಗೆ ಬೈದರೆ ನಾಯಕನಾಗಬಹುದು ಎಂಬ ಕಾರಣಕ್ಕೆ ಅವರು ಮೋಸಗಾರ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.

ಹೆಲಿಕಾಪ್ಟರ್‌ ಪತನವಾಗಿ ಮೃತಪಟ್ಟಿರುವ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 13 ಮಂದಿಗೆ ದಾವಣಗೆರೆ ಕುರುಬರ ಯುವ ಘಟಕವು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

ಬಿಜೆಪಿ ನೇತೃತ್ವದ ಸರ್ಕಾರ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಗೌರವಧನ ಕೊಟ್ಟಿಲ್ಲ, ಒಂದು ಮನೆಯೂ ನಿರ್ಮಾಣ ಆಗಿಲ್ಲ. ಗ್ರಾಮ ಸ್ವರಾಜ್ ಜಾರಿಗೆ ತಂದಿದ್ದು ಕಾಂಗ್ರೆಸ್. ಹಾಗಾಗಿ ಈ ಬಾರಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

ದೇಶದ ಸೇನಾನಿ ಕಳೆದುಕೊಂಡ ದುಃಖದಲ್ಲಿ ದೇಶವಿದೆ. ಈ ಘಟನೆ ಆಕಸ್ಮಿಕವಾಗಿ ನಡೆದಿದೆಯೇ ಅಥವಾ ಬೇರೆ ಕಾರಣ ಇದೆಯೇ ಎಂಬುದು ತನಿಖೆಯಾಗಬೇಕು ಎಂದು ಹೇಳಿದರು.

ಮುಖಂಡರಾದ ಪಿ ರಾಜಕುಮಾರ್, ಗಿರೀಶ್ ಫುಟ್‌ಬಾಲ್, ಲಿಂಗರಾಜ್, ರಾಜೇಶ್, ರಮೇಶ್, ದೀಪಕ್, ಮಧು ನಾಗರಾಜ್‌ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.