ದಾವಣಗೆರೆ: ಆಗಸ್ಟ್ 6ರ ರಾತ್ರಿ ನಡೆದಿದ್ದ ಶ್ರೀರಾಮನಗರದ ನರಸಿಂಹ (26) ಎಂಬುವರ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಘಟನೆ ನಡೆದ 24 ಗಂಟೆಗಳಲ್ಲೇ ಬಂಧಿಸಿದ್ದಾರೆ.
ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಜಿಲ್ಲಾ ಡಾಗ್ ಸ್ಕ್ವಾಡ್ ಅಪರಾಧ ವಿಭಾಗದ ‘ತಾರಾ’ ಎಂಬ ಶ್ವಾನವು ಪ್ರಮುಖ ಪಾತ್ರ ವಹಿಸಿದೆ.
‘ಕೊಲೆ ನಡೆದ ಸ್ಥಳದಿಂದ ಶ್ವಾನವು 8 ಕಿ.ಮೀ ಕ್ರಮಿಸಿ ಆರೋಪಿ ಶಿವಯೋಗೀಶ್‌ನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಶ್ವಾನ ನೀಡಿದ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.