ADVERTISEMENT

‘ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:04 IST
Last Updated 22 ನವೆಂಬರ್ 2024, 16:04 IST
ತ್ಯಾವಣಿಗೆ ಸಮೀಪದ ನಲ್ಕುದುರೆ ಪ್ರೌಢಶಾಲೆಯಲ್ಲಿ ಶುಕ್ರವಾರ ಕಸಾಪ ವತಿಯಿಂದ ನುಡಿ ತೋರಣ ಕಾರ್ಯಕ್ರಮ ನಡೆಯಿತು
ತ್ಯಾವಣಿಗೆ ಸಮೀಪದ ನಲ್ಕುದುರೆ ಪ್ರೌಢಶಾಲೆಯಲ್ಲಿ ಶುಕ್ರವಾರ ಕಸಾಪ ವತಿಯಿಂದ ನುಡಿ ತೋರಣ ಕಾರ್ಯಕ್ರಮ ನಡೆಯಿತು   

ತ್ಯಾವಣಿಗೆ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ತ್ಯಾವಣಿಗೆ ಕರ್ನಾಟಕ ಪಬ್ಲಿಕ್ ಶಾಲೆ ಕನ್ನಡ ಶಿಕ್ಷಕಿ ಕಮಲಾಬಾಯಿ ತಿಳಿಸಿದರು.

ಸಮೀಪದ ನಲ್ಕುದರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ಅಂಗಳದಲ್ಲಿ ನುಡಿ ತೋರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲೇ ವಚನಗಾರ್ತಿಯರು ಸ್ತ್ರೀವಾದ, ದಲಿತವಾದಕ್ಕೆ ಅಡಿಪಾಯ ಹಾಕಿದ್ದರು. ಅಕ್ಕಮಹಾದೇವಿ ಅವರನ್ನು ಕನ್ನಡ ಸಾಹಿತ್ಯದ ಮೊದಲ ಬಂಡಾಯ ಲೇಖಕಿ ಎಂದು ನಾವು ಗುರುತಿಸಬಹುದು ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸ್ತ್ರೀಯರು ಹಿಂದಿನ ಕಾಲದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದರು. ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾರ್ವಜನಿಕವಾಗಿ ಭಾಗಿಯಾಗುವ ಹೆಚ್ಚಿನ ಅವಕಾಶಗಳು ಸ್ತ್ರೀಯರಿಗೆ ಸೃಷ್ಟಿಯಾಗಲಿಲ್ಲ. ಮಹಿಳೆಯರು ಮುಖ್ಯವಾಹಿನಿಗೆ ಬರಲು ಸಾಕಷ್ಟು ವರ್ಷಗಳೇ ಕಳೆದವು’ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಎಂ.ಜಿ.ನಾಯ್ಕ್ ಕಾಶಿಪುರ, ಶಿಕ್ಷಕರಾದ ಗುರುಪಾದಪ್ಪ ನೊಣವಿನಕೆರೆ, ಲೋಹಿತ್‌ಕುಮಾರ್, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.