ಚೀಲೂರು (ನ್ಯಾಮತಿ): ತುಂಗಭದ್ರಾ ನದಿಯಲ್ಲಿ ರಾಸಾಯನಿಕಯುಕ್ತ ನೀರು ಹರಿಯುತ್ತಿರುವುದರಿಂದ ಬಳಕೆಗೆ ಯೋಗ್ಯವಾಗಿಲ್ಲ ಎಂದು ಬಿಜೆಪಿ ಮುಖಂಡ ರಾಂಪುರದ ಗಿರೀಶ ಪಟೇಲ್ ಹೇಳಿದರು.
ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮಕ್ಕೆ ಮಂಗಳವಾರ ಆಗಮಿಸಿದ ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ಅವರು ಮಾತನಾಡಿದರು.
‘ನೀರಾವರಿ ಬೆಳೆಗಳು, ಅಡಿಕೆ ತೋಟ ಹಾಗೂ ತರಕಾರಿ ಬೆಳೆಯಲು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಬಳಸಲಾಗುತ್ತಿದೆ. ಪಟ್ಟಣಗಳ ತ್ಯಾಜ್ಯ ನೀರೂ ನದಿಯಲ್ಲಿ ಬೆರೆಯುವುದರಿಂದ ತುಂಗಭದ್ರಾ ಕಲುಷಿತಗೊಂಡಿದ್ದು, ಆ ನೀರನ್ನು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ. ಈ ನಿಟ್ಟಿನಲ್ಲಿ ನದಿಯನ್ನು ಸ್ವಚ್ಛವಾಗಿಡಬೇಕು ಎಂಬ ಉದ್ದೇಶದಿಂದ ನಿರ್ಮಲ ತುಂಗಭದ್ರಾ ಆಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.
ಜಲಜಾಗೃತಿ, ಜನಜಾಗೃತಿಗಾಗಿ ನಿರ್ಮಲ ತುಂಗಭದ್ರಾ ಅಭಿಯಾನ ನ.6ರಂದು ಶೃಂಗೇರಿಯಿಂದ ಹೊರಟು ಕಿಷ್ಕಿಂಧೆಯವರೆಗೆ 400 ಕಿ.ಮೀ. ಸಂಚರಿಸಲಿದೆ ಎಂದು ತಂಡದ ನೇತೃತ್ವ ವಹಿಸಿರುವ ಬಿ.ಎಂ.ಕುಮಾರಸ್ವಾಮಿ ತಿಳಿಸಿದರು.
ಕಾರ್ಯದರ್ಶಿ, ಮಾಜಿ ಸೈನಿಕ ಎಂ.ವಾಸಪ್ಪ, ಹೊನ್ನಾಳಿ ಬೀರಪ್ಪ, ಆರೀಫ್, ಇ.ಲೋಕೇಶ, ಎಂ.ಆರ್.ಮಹೇಶ, ಕೆ.ವಿ. ಚನ್ನಪ್ಪ, ಎ.ಬಿ.ಹನುಮಂತಪ್ಪ, ಪ್ರವೀಣ, ಶ್ರೀನಿವಾಸ, ರವಿಶಂಕರ, ಎಚ್.ಎಂ.ಅರುಣಕುಮಾರ, ಪಂಕಜಾ ಹಾಗೂ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.