ADVERTISEMENT

ಅಮ್ಮನ ಹಬ್ಬಕ್ಕೆ ಸಂಭ್ರಮದ ಸಿದ್ಥತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 5:48 IST
Last Updated 19 ಮಾರ್ಚ್ 2024, 5:48 IST
ಮಲೇಬೆನ್ನೂರು ಪಟ್ಟಣದ ಗ್ರಾಮದೇವತೆ ಉತ್ಸವದ ಅಂಗವಾಗಿ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ, ಹಟ್ಟಿ ದುರ್ಗಾದೇವಿ ಹಾಗೂ ಪರಶುರಾಮ ದೇವರ ಚಿಕ್ಕ ರಥೋತ್ಸವ ಸೋಮವಾರ ನೆರವೇರಿಸಲಾಯಿತು
ಮಲೇಬೆನ್ನೂರು ಪಟ್ಟಣದ ಗ್ರಾಮದೇವತೆ ಉತ್ಸವದ ಅಂಗವಾಗಿ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ, ಹಟ್ಟಿ ದುರ್ಗಾದೇವಿ ಹಾಗೂ ಪರಶುರಾಮ ದೇವರ ಚಿಕ್ಕ ರಥೋತ್ಸವ ಸೋಮವಾರ ನೆರವೇರಿಸಲಾಯಿತು    

ಮಲೇಬೆನ್ನೂರು: ಪಟ್ಟಣದ ಅಧಿದೇವತೆ ಕೋಡಿಮಾರೇಶ್ವರಿ, ಏಕನಾಥೇಶ್ವರಿ ಹಾಗೂ ಹಟ್ಟಿ ದುರ್ಗಮ್ಮನ ಉತ್ಸವ ‘ಅಮ್ಮನಹಬ್ಬ’ದ ಆಚರಣೆಗೆ ಸಿದ್ಧತೆ ಭದರಿಂದ ಸಾಗಿದೆ.

ಹಬ್ಬದ ಪ್ರಯುಕ್ತ ಸೋಮವಾರ ಚಿಕ್ಕ ರಥೋತ್ಸವ ಪಟ್ಟಣದ ರಾಜಬೀದಿಯಲ್ಲಿ ಸಾಂಪ್ರದಾಯಿಕ ರೀತಿ ರಿವಾಜಿನ ನಡುವೆ ಮಂಗಳವಾದ್ಯ, ಡೊಳ್ಳು, ನಾಸಿಕ್‌ ಡೋಲಿನ ಅಬ್ಬರದ ಶಬ್ದದ ನಡುವೆ ಜರುಗಿತು.

ಪಟ್ಟಣದ ಎಲ್ಲ ಬೀದಿಗಳು ಸ್ವಚ್ಛಗೊಂಡಿದ್ದು, ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಮುಖ್ಯ ಮಂಟಪ, ಮಹಾದ್ವಾರ ನಿರ್ಮಿಸುವ ಕೆಲಸ ಮುಕ್ತಾಯದ ಹಂತ ತಲುಪಿದೆ.

ADVERTISEMENT

ಪಟ್ಟಣದ ಮನೆಮನೆಗಳು ಜನರಿಂದ ಭರ್ತಿಯಾಗಿವೆ. ಬೀದಿಗಳಲ್ಲಿ ವಾಹನ ಸಂಚಾರದ ಭರಾಟೆ ಕೂಡ ಹೆಚ್ಚಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ ಕಿರಾಣಿ, ಹೂವು, ಹಣ್ಣು ವ್ಯಾಪಾರ ಭರದಿಂದ ಸಾಗಿದೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ಹಬ್ಬದ ಅಂಗವಾಗಿ ಗರಂ ಮಸಾಲೆ ವ್ಯಾಪಾರಿಗಳು ಅಂಗಡಿ ಹಾಕಿದ್ದು ಬಗೆಬಗೆಯ ಮಸಾಲೆ ಪದಾರ್ಥದ ವ್ಯಾಪಾರ ಭರದಿಂದ ಸಾಗಿದೆ.

ಸಿಹಿ ತಿಂಡಿ ಪರಿಮಳ: ಹಬ್ಬದ ಪ್ರಯುಕ್ತ ಸಿಹಿ ತಯಾರಿಕೆ ಘಮಲು ಪಟ್ಟಣದ ವಿವಿಧ ಬೀದಿಗಳಲ್ಲಿ ಹರಡುತ್ತಿದೆ. ಬೂಂದಿ, ಲಾಡು, ಲಡ್ಡು, ಮೈಸೂರ್‌ ಪಾಕ್‌, ಜಹಾಂಗೀರ್‌, ಖಾರ ಮಿಕ್ಸ್‌, ಅವಲಕ್ಕಿ, ಪೋಹಾ ಶೇವ್‌ ತಯಾರಿ ಬಿರುಸಿನಿಂದ ಸಾಗಿದೆ. ಬಾಡೂಟಕ್ಕೂ ಹಲವಾರು ಕಡೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಮಲೇಬೆನ್ನೂರು ಪಟ್ಟಣದಲ್ಲಿ ಅಮ್ಮನ ಹಬ್ಬದ ಪ್ರಯುಕ್ತ ಗರಂ ಮಸಾಲೆ  ಪದಾರ್ಥಗಳ ವ್ಯಾಪಾರ  ಸೋಮವಾರ ಭರದಿಂದ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.