ಬಸವಾಪಟ್ಟಣ: ವರಮಹಾಲಕ್ಷ್ಮಿ ವ್ರತವನ್ನು ಇಲ್ಲಿನ ಮಹಿಳೆಯರು ಶ್ರದ್ಧೆ ಮತ್ತು ಸಡಗರದಿಂದ ಶುಕ್ರವಾರ ಆಚರಿಸಿದರು.
ಮಹಿಳೆಯರು ಮನೆಗಳನ್ನು ತಳಿರು ತೋರಣ, ಹೂಮಾಲೆಗಳಿಂದ ಅಲಂಕರಿಸಿದ್ದರು. ವ್ರತದ ಅಂಗವಾಗಿ ಗಂಗಾಪೂಜೆ, ಗಣಪತಿ ಪೂಜೆ ನೆರವೇರಿಸಿ, ಪೂಜೆಗಾಗಿ ಸಿದ್ಧಪಡಿಸಿದ್ದ ಮಂಟಪದಲ್ಲಿ ವರಲಕ್ಷ್ಮಿ ದೇವಿಯನ್ನು ಕಳಶದಲ್ಲಿ ಆಹ್ವಾನಿಸಿ ಪಂಚಾಮೃತ ಅಭಿಷೇಕದೊಂದಿಗೆ ಶೋಡಷೋಪಚಾರ ಪೂಜೆ ನೆರವೇರಿಸಿದರು. ಕಡುಬು, ಹೋಳಿಗೆ ನೈವೇದ್ಯದ ನಂತರ ಮಂಗಳಾರತಿ ಮಾಡಿ ಹಿರಿಯ ಮಹಿಳೆಯರಿಗೆ ಬಾಗಿನ ನೀಡಿ ಆಶೀರ್ವಾದ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.