ADVERTISEMENT

ಹಿರೇಕೋಗಲೂರು | ಬಿಡದ ಕುಡಿಯುವ ನೀರು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 14:06 IST
Last Updated 25 ಮಾರ್ಚ್ 2024, 14:06 IST
ಸಂತೇಬೆನ್ನೂರು ಸಮೀಪದ ಹಿರೇಕೋಗಲೂರು ಗ್ರಾಮದಲ್ಲಿ ಸೋಮವಾರ ಎ.ಡಿ ಹಾಗೂ ಎಸ್.ಟಿ. ಕಾಲೊನಿ ನಿವಾಸಿಗಳು ಕುಡಿಯುವ ನೀರು ಪೂರೈಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಸಂತೇಬೆನ್ನೂರು ಸಮೀಪದ ಹಿರೇಕೋಗಲೂರು ಗ್ರಾಮದಲ್ಲಿ ಸೋಮವಾರ ಎ.ಡಿ ಹಾಗೂ ಎಸ್.ಟಿ. ಕಾಲೊನಿ ನಿವಾಸಿಗಳು ಕುಡಿಯುವ ನೀರು ಪೂರೈಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು    

ಹಿರೇಕೋಗಲೂರು (ಸಂತೇಬೆನ್ನೂರು): ಇಲ್ಲಿನ ಎ.ಡಿ ಹಾಗೂ ಎಸ್.ಟಿ. ಕಾಲೊನಿಯಲ್ಲಿ ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಲವು ಬಾರಿ ಅಲವತ್ತುಕೊಂಡರೂ ನೀರು ಬಿಡುತ್ತಿಲ್ಲ ಎಂದು ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ, ಗ್ರಾಮ ಪಂಚಾಯಿತಿಗೆ ತೆರಳಿ ಪಿಡಿಒಗೆ ಮನವಿ ಸಲ್ಲಿಸಿದರು.

ಬೀದಿ ನಲ್ಲಿಗಳನ್ನೇ ಆಶ್ರಯಿಸಿ ನೀರು ತುಂಬಿಸಿಕೊಳ್ಳುವ ನಿವಾಸಿಗಳಿಗೆ ತೀವ್ರ ತೊಂದರೆ ಆಗಿದೆ. ಮನೆ ನಲ್ಲಿ ಹೊಂದಿರುವವರಿಗೆ ಸಾಕಷ್ಟು ನೀರು ಸಿಗುತ್ತಿದೆ. ತಕ್ಷಣ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋಬಳಿ ಅಧ್ಯಕ್ಷ ಎನ್.ಆರ್. ಕುಮಾರ್ ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.