ADVERTISEMENT

ಬಂಡಾಯ ಕಾಣಲಿಲ್ಲ... ಹೊಗಳುವುದು ಬಿಡಲಿಲ್ಲ!

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 9:18 IST
Last Updated 15 ಜೂನ್ 2015, 9:18 IST

ಹುಬ್ಬಳ್ಳಿ: ತಾಲ್ಲೂಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣ ಮಾತನಾಡಿದ ಡಾ.ಸಿದ್ದಲಿಂಗಯ್ಯ ಅವರಲ್ಲಿ ಮೊದಲಿನ ಬಂಡಾಯ ಮನೋಭಾವ ಕಂಡು ಬರಲಿಲ್ಲ. ಸುಮಾರು ಒಂದು ಗಂಟೆಯ ಕಾಲ ಮಾಡಿದ ಭಾಷಣದಲ್ಲಿ ಅವರು ಹೆಚ್ಚು ಸಮಯವನ್ನು ಜನಪ್ರತಿನಿಧಿಗಳನ್ನು ಹೊಗಳುವುದಕ್ಕೆ ಮೀಸಲಿಟ್ಟರು!

ಸಾಹಿತ್ಯದ ಕುರಿತಂತೆ ಸಿದ್ಧಲಿಂಗಯ್ಯನವರ ಮಾತುಗಳನ್ನು ಕೇಳಲು ಬಂದಿದ್ದ ಸಾಹಿತ್ಯಾಭಿಮಾನಿಗಳಿಗೆ ಇದರಿಂದ ನಿರಾಸೆಯಾಯಿತು. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೂ, ಜನಪ್ರತಿನಿಧಿಗಳ ವಿರುದ್ಧ ಅದೇ ಅಭಿಪ್ರಾಯ ವ್ಯಕ್ತಪಡಿಸಲು ಹೋಗಲಿಲ್ಲ.

‘ಸಾಹಿತಿಗಳು ಜನಪ್ರತಿನಿಧಿಗಳನ್ನು ತೆಗಳಲೇಬೇಕು ಎಂಬುದು ನಮ್ಮ ವಾದವಲ್ಲ. ಯುವ ಬರಹಗಾರರಿಗೆ ಸಾಹಿತ್ಯದ ಕುರಿತು ಸಲಹೆ ಕೊಡುವ ನಿಟ್ಟಿನಲ್ಲಿ ಅವರು ಈ ಅವಕಾಶವನ್ನು ಬಳಸಿಕೊಂಡಿದ್ದರೆ ಸಂತಸವಾಗುತ್ತಿತ್ತು. ಸ್ವಲ್ಪ ಹೆಚ್ಚೇ ಅನಿಸುವಷ್ಟು ಅವರು ಜನಪ್ರತಿನಿಧಿಗಳನ್ನು ಹೊಗಳಿದ್ದು ಸರಿ ಕಾಣಲಿಲ್ಲ’ ಎಂದು ಯುವ ಸಾಹಿತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.