ADVERTISEMENT

ಸಂಬಂಧಗಳ ಹುಡುಕಾಟ ಚಿತ್ತಾಲರ ಆಶಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2014, 5:57 IST
Last Updated 5 ಏಪ್ರಿಲ್ 2014, 5:57 IST

ಧಾರವಾಡ: ‘ಸೃಜನಶೀಲತೆ ಸಂಶೋಧನೆಗೆ ಮುನ್ನಡಿಯಾಗಬಲ್ಲುದೆಂದು ನಂಬಿದ್ದ ಚಿತ್ತಾಲರಿಗೆ ಸಂಬಂಧಗಳ ಹುಡುಕಾಟವೇ ಬಹುಮುಖ್ಯ ಆಶಯವಾಗಿತ್ತು’ ಎಂದು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ‘ಯಶವಂತ ಚಿತ್ತಾಲ: ಒಂದು ನೆನಪು’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ಪ್ರಾಣಿಗಳು ತಮ್ಮ ಸಂತತಿಯನ್ನು ಹಿಂಸಿಸಲಾರವು, ಪ್ರಾಣಿಗಳು ಬೇಟೆಯಾಡುವುದು ತಮ್ಮ ಆಹಾರಕ್ಕಾಗಿ. ಅದು ಅವುಗಳಿಗೆ ಅನಿವಾರ್ಯವೂ ಹೌದು. ಆದರೆ ಮನುಷ್ಯ-ಮನುಷ್ಯನನ್ನು ಕೊಲ್ಲುವುದೇಕೆ? ಇದು ಆಹಾರಕ್ಕಂತೂ ಅಲ್ಲವೇ ಅಲ್ಲ. ಇದೊಂದು ರಾಗ- ದ್ವೆೇಷದ ಪರಮಾವಧಿ. ಹಾಗಾಗಿ ಮನುಷ್ಯ ಮೂಲತಃ ಹಿಂಸಾಚಾರಿ ಎಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಶಿಖಾರಿ, ಪುರಷೋತ್ತಮ ಮೊದಲಾದ ಕಾದಂಬರಿಗಳು ಗಮನಾರ್ಹವಾದವುಗಳು. ಚಿತ್ತಾಲರು ಪ್ರಗತಿಶೀಲ ಯುಗದ ಪ್ರಮುಖ ಲೇಖಕರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ, ‘ಕತ್ತಲೆಗೂ -ಸೃಜನಶೀಲತೆಗೂ ಒಂದು ರೀತಿಯ ಸಂಬಂಧವಿದೆ. ವಿಮರ್ಶೆಗೂ- ಸೃಜನಶೀಲತೆಗೂ ಸಂಬಂಧವಿದ್ದು, ವಿಮರ್ಶೆ ಕೂಡ ಸೃಜಲಶೀಲವೇ ಎಂದು ಹೇಳಿದರು.

ಚಿತ್ತಾಲರ ಶಿಖಾರಿ ಕನ್ನಡದ ಮಹತ್ವದ ಕಾದಂಬರಿ, ಕಾರ್ಪೊೋರೇಟ್‌ ಜಗತ್ತಿನ ಅಂತರಂಗವನ್ನು ಭೇದಿಸಿದೆ. ಶಿಖಾರಿಯನ್ನು ಮೀರಿಸುವ ಕಾದಂಬರಿ ಇನ್ನೂ ಕನ್ನಡದಲ್ಲಿ ಬಂದಿಲ್ಲ. ಪತ್ತೇದಾರಿ ಸ್ವರೂಪದ ಶಿಖಾರಿ ಸಾಕಷ್ಟು ಕುತೂಹಲ ಹುಟ್ಟಿಸಿದ ಅದ್ಭುತ ಕಾದಂಬರಿ ಎಂದು ವಿಶ್ಲೇಷಿಸಿದರು.

ಪ್ರತಿ ವಿಷಯದಲ್ಲಿಯೂ ಸೂಕ್ಷ್ಮ ಸಂವೇದನೆ ಹೊಂದಿದ ಚಿತ್ತಾಲರು ಬದುಕು -ಬರಹ­ಗಳೆ­ರಡರಲ್ಲಿಯೂ ವ್ಯವಸ್ಥಿತರಾಗಿದ್ದರು. ಅವರ ಕೃತಿಗಳಲ್ಲಿ ಪತ್ತೇದಾರಿಕೆಯನ್ನು ತುಂಬ ಜತನವಾಗಿ ಮುದ್ದಾಮ ಉಳಿಸಿಕೊಂಡು ಬರುವುದು ಅವರ ಬರವಣಿಗೆಯ ಶೈಲಿಯಾಗಿತ್ತು ಎಂದು ಅಭಿಪ್ರಾಯಪಟ್ಟರು.

ಎಸ್ಸೆಸ್ಸೆಲ್ಸಿ: 25,497 ವಿದ್ಯಾರ್ಥಿಗಳು ಹಾಜರು

ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ ಜರುಗಿದ ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ಪರೀಕ್ಷೆಗೆ ಒಟ್ಟು 25,497 ವಿದ್ಯಾರ್ಥಿಗಳ ಪೈಕಿ 25,065 ವಿದ್ಯಾರ್ಥಿ­ಗಳು ಹಾಜರಾಗಿದ್ದು, 432 ವಿದ್ಯಾರ್ಥಿಗಳು ಗೈರಾ­ಗಿ­ದ್ದಾರೆ. ಯಾವುದೇ ಡಿಬಾರ್‌ ಆಗಿರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.