ADVERTISEMENT

‘ಲೈಂಗಿಕ ಅಲ್ಪಸಂಖ್ಯಾತರಿಗೂ ಗೌರವ ಸಿಗಬೇಕು: ಶ್ರೀಶಾನಂದ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 6:34 IST
Last Updated 25 ಜನವರಿ 2016, 6:34 IST

ಧಾರವಾಡ: ‘ಲೈಂಗಿಕ ಅಲ್ಪಸಂ ಖ್ಯಾತರಿಗೂ ಈ ಸಮಾಜದಲ್ಲಿ ವಸತಿ, ಶಿಕ್ಷಣ, ಆರೋಗ್ಯ ಹಾಗೂ ವಾಕ್‌ಸ್ವಾ ತಂತ್ರ್ಯವನ್ನು ಭಾರತದ ಸಂವಿಧಾನ ಕಲ್ಪಿಸಿದೆ. ಈ ಸಮಾಜದಲ್ಲಿ ಅವರಿಗೂ ಗೌರವ ಸಿಗುವಂತಾಗಬೇಕು’ ಎಂದು ಜಿಲ್ಲಾ ನ್ಯಾಯಾಧೀಶ ವಿ.ಶ್ರೀಶಾನಂದ ಹೇಳಿದರು.

ಇಲ್ಲಿನ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯ ದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ಕಾನೂನು ಸಾಕ್ಷರತಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ಜನ ಸಾಮಾನ್ಯರಂತೆ ಈ ಸಮಾಜ ದಲ್ಲಿ ನಮಗೂ ಉದ್ಯೋಗ ಕಲ್ಪಿಸಿಕೊಡ ಬೇಕಿದೆ. ಹುಟ್ಟಿನಿಂದಲೇ ನಾವು ಸಾಮಾ ನ್ಯರಂತೆ ಇರುತ್ತೇವೆ. ಆದರೆ, ಬೆಳೆಯುತ್ತಾ ಹಾರ್ಮೋನ್‌ಗಳ ಬದಲಾವಣೆಯಿಂದ ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ ಪರಿವರ್ತನೆಯಾಗುತ್ತಾರೆ. ಈ ಸಮಾಜದಲ್ಲಿ ನಮಗೆ ಸಹಾಯ ಹಾಗೂ ಉದ್ಯೋಗಗಳಿಲ್ಲದೇ ಪರದಾಡು ತ್ತಿದ್ದೇವೆ’ ಎಂದು ಲೈಂಗಿಕ ಅಲ್ಪಸಂಖ್ಯಾತೆ ರಾಜರತ್ನ ಹೇಳಿದರು.

ಹಿರಿಯ ವಕೀಲ ಬಿ.ಎಸ್.ಸಂಗಟಿ ಮಾತನಾಡಿ, ‘ಸಾಮಾಜಿಕವಾಗಿ, ಆರ್ಥಿಕ ವಾಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ವೇದಿಕೆ ಹಂಚಿಕೊಳ್ಳಲು ಲೈಂಗಿಕ ಅಲ್ಪಸಂಖ್ಯಾತರಿಗೂ ಹೈಕೋರ್ಟ್‌ ಅವಕಾಶ ಕಲ್ಪಿಸಿದೆ’ ಎಂದರು.

ಜಿಲ್ಲಾ ನ್ಯಾಯಾಧೀಶರಾದ ಜಿ.ಎಂ. ಕುಂಬಾರ, ಎಸ್‌.ಎಸ್‌.ಬಳ್ಳೊಳ್ಳಿ, ಸಿದ್ದಪ್ಪ ಹೊಸಮನಿ, ಸಿವಿಲ್‌ ನ್ಯಾಯಾಧೀಶರಾದ ಸುಮಂಗಲಾ, ಅವಳಿನಗರ ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಹಾಗೂ ಹಿರಿಯ ವಕೀಲೆ ಪ್ರಫುಲ್ಲಾ ನಾಯಕ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.