ADVERTISEMENT

ಹುಬ್ಬಳ್ಳಿ | ರೈಲ್ವೆ ಉದ್ಯೋಗಿಗೆ ₹ 15.56 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 16:23 IST
Last Updated 6 ಜೂನ್ 2024, 16:23 IST
<div class="paragraphs"><p>ಹಣ ವಂಚನೆ (ಪ್ರಾತಿನಿಧಿಕ ಚಿತ್ರ)</p></div>

ಹಣ ವಂಚನೆ (ಪ್ರಾತಿನಿಧಿಕ ಚಿತ್ರ)

   

ಹುಬ್ಬಳ್ಳಿ: ವಿವಿಧ ಆ್ಯಪ್‌ಗಳಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ ಇಲ್ಲಿನ ಕೇಶ್ವಾಪುರದ ಜನತಾ ಕಾಲೊನಿಯ ವಸಂತನಗರದ ನಿವಾಸಿ, ರೈಲ್ವೆ ಉದ್ಯೋಗಿ ಲಕ್ಷ್ಮಣ ಪೂಜಾರಿ ಅವರಿಗೆ ಅಪರಿಚಿತ ವ್ಯಕ್ತಿಗಳು ₹15.56 ಲಕ್ಷ ವಂಚಿಸಿದ್ದಾರೆ.

ವಾಟ್ಸ್ಆ್ಯಪ್ ಮೂಲಕ ಲಕ್ಷ್ಮಣ ಅವರನ್ನು ಪರಿಚಯಿಸಿಕೊಂಡ ಅಪರಿಚಿತರು, ವಿವಿಧ ಆ್ಯಪ್‌ಗಳಲ್ಲಿ ಹಣ ಹೂಡುವಂತೆ ಪುಸಲಾಯಿಸಿದ್ದಾರೆ. ಆ್ಯಪ್‌ನಲ್ಲಿ ಲಾಭಾಂಶ ತೋರಿಸಿ, ಅವರ ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು ಲಾಭಾಂಶ, ಹೂಡಿಕೆ ಮಾಡಿದ ಹಣ ನೀಡದೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.