ADVERTISEMENT

ಫೆಡರೇಷನ್‌ ಕಪ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್: ಅಭಿಷೇಕ ಹೊರಕೇರಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 9:03 IST
Last Updated 2 ಜನವರಿ 2020, 9:03 IST
ಅಭಿಷೇಕ ಹೊರಕೇರಿ
ಅಭಿಷೇಕ ಹೊರಕೇರಿ   

ಹುಬ್ಬಳ್ಳಿ: ಮಧ್ಯಪ್ರದೇಶದ ಇಂದೋರ್‌ನಲ್ಲಿ ಇತ್ತೀಚಿಗೆ ನಡೆದ ಫೆಡರೇಷನ್‌ ಕಪ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅಮರಗೋಳದ ಅಭಿಷೇಕ ಬಸಪ್ಪ ಹೊರಕೇರಿ ಚಿನ್ನದ ಪದಕ ಜಯಿಸಿದ್ದಾರೆ.

ಕೇಶ್ವಾಪುರದ ಎಟರ್ನಲ್‌ ಜಿಮ್‌ನಲ್ಲಿ ಪವರ್‌ಲಿಫ್ಟರ್‌ ಕೋಚ್‌ ಅಬ್ದುಲ್‌ ಮುನಾಫ್‌ ಬಳಿ ಅಭಿಷೇಕ ತರಬೇತಿ ಪಡೆಯುತ್ತಿದ್ದಾರೆ.

ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್‌ಗೆ ಶಿವಪ್ಪ ಅರ್ಹತೆ

ADVERTISEMENT

ಹುಬ್ಬಳ್ಳಿ: ಧಾರವಾಡ ತಾಲ್ಲೂಕಿನ ಮರೇವಾಡ ಗ್ರಾಮದ ಶಿವಪ್ಪ ಸಲಕಿ ಇದೇ ವರ್ಷ ಕೆನಡಾದಲ್ಲಿ ನಡೆಯಲಿರುವ ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಇತ್ತೀಚಿಗೆ ಮಲೇಷ್ಯಾದಲ್ಲಿ ಜರುಗಿದ 21ನೇ ಏಷ್ಯಾ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನ 1500 ಮೀಟರ್‌ ಓಟದ ಸ್ಪರ್ಧೆಯಲ್ಲಿ ಐದನೇ ಸ್ಥಾನ ಗಳಿಸಿದ್ದರು. ನಿಗದಿತ ಗುರಿಯನ್ನು ಏಳು ನಿಮಿಷ 22.60 ಸೆಕೆಂಡುಗಳಲ್ಲಿ ತಲುಪಿದ್ದರು. 5,000 ಮೀಟರ್‌ ಓಟದ ಸ್ಪರ್ಧೆಯ ಗುರಿಯನ್ನು 28 ನಿಮಿಷ 05.30 ಸೆಕೆಂಡುಗಳಲ್ಲಿ ಮುಟ್ಟಿ ಏಳನೇ ಸ್ಥಾನ ಗಳಿಸಿ ಅರ್ಹತೆ ಗಳಿಸಿಕೊಂಡಿದ್ದಾರೆ.

ರಾಜ್ಯ ಮಾಸ್ಟರ್ಸ್‌ ಅಥ್ಲೆಟಿಕ್‌ ಸಂಸ್ಥೆ ಚಿತ್ರದುರ್ಗದಲ್ಲಿ ಡಿಸೆಂಬರ್‌ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಟೂರ್ನಿಯ 400, 800 ಮತ್ತು 1500 ಮೀಟರ್ ಓಟದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಗಳಿಸಿ ಜ. 10ರಿಂದ ಕೇರಳದ ಕೊಯಿಕೋಡ್‌ದಲ್ಲಿ ಆಯೋಜನೆಯಾಗಿರುವ ರಾಷ್ಟ್ರೀಯ ಮಾಸ್ಟರ್ಸ್‌ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.